ದೇಶ

ವಿಜಯ್ ಮಲ್ಯ ಆಸ್ತಿ ಮುಟ್ಟುಗೋಲಿಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ

Raghavendra Adiga
ಮುಂಬೈ: 9,000 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸಂಸ್ಥೆಗಳು ತನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ತಡೆ ನಿಡಬೇಕೆಂದು ಕೋರಿ ಮದ್ಯದ ದೊರೆ  ವಿಜಯ್ ಮಲ್ಯ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಅಕಿಲ್ ಕುರೇಶಿ ಮತ್ತು ಎಸ್.ಜೆ.ಕಥವಾಲಾ ಅವರ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿ ಮಲ್ಯ ಮನವಿಯನ್ನು ತಿರಸ್ಕರಿಸಿದೆ.ಹೈಕೋರ್ಟ್ ತನ್ನ ಮೇಲಿರಿವ ಆರ್ಥಿಕ ಅಪರಾಧಿ ಎಂಬ ಹಣೆಪಟ್ಟಿಯನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಗಿಸುವವರೆಗೆ ತನಗೆ ಹಾಗೂ ತನ್ನ ಸ್ವತ್ತುಗಳಿಗೆ ರಕ್ಷಣೆ ನಿಡಬೇಕೆಂದು ಮಲ್ಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಅವರ ಮೇಲೆ ಎಫ್‌ಇಒಎ ಕಾಯ್ದೆಯ ಜಾರಿಯನ್ನು ಪ್ರಶ್ನಿಸಿ ಮಲ್ಯ ಕೋರ್ಟ್ ಮೊರೆ ಹೋಗಿದ್ದಾರೆ. ಈ ವರ್ಷದ ಜನವರಿಯಲ್ಲಿ ಮಲ್ಯ ಅವರನ್ನು ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಲ್ಯ ಆರ್ಥಿಕ ಅಪರಾಧಿ ಎಂದು ಘೋಷಿಸಿತ್ತು.. ಅವರು ಮಾರ್ಚ್ 2016 ರಲ್ಲಿ ಭಾರತದಿಂದ ಪಲಾಯನ ಮಾಡಿದ್ದು ಅಂದಿನಿಂದಲೂ ಯುನೈಟೆಡ್ ಕಿಂಗ್‌ಡಂನಲ್ಲಿ ವಾಸಿಸುತ್ತಿದ್ದಾರೆ.
SCROLL FOR NEXT