ದೇಶ

ಈದ್ ವೇಳೆ ನನಗೆ ಜೈ ಶ್ರೀರಾಮ್ ಸಂದೇಶಗಳು ಬಂದಿತ್ತು: ಸಂಸದೆ ನುಸ್ರತ್ ಜಹಾನ್

Vishwanath S
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಲೋಕಸಭೆಯಲ್ಲಿ ಪ್ರಮಾಣ ವಚನ ಪಡೆಯುತ್ತಿದ್ದಾಗ ಹಣೆಗೆ ಕುಂಕುಮ ಮತ್ತು ಮಂಗಳಸೂತ್ರ, ಬಳೆ ಹಾಕಿಕೊಂಡಿದ್ದು ಸುದ್ದಿಯಾಗಿದ್ದರು. ಇನ್ನು ಇದೀಗ ತಮಗೆ ಈದ್ ವೇಳೆ ಜೈ ಶ್ರೀರಾಮ್ ಎಂಬ ಸಂದೇಶಗಳು ಬರುತ್ತಿದ್ದವು ಎಂದು ಹೇಳಿದ್ದಾರೆ.
ನುಸ್ರತ್ ಜದಾನ್ ಅವರು ದೇವರ ಹೆಸರನ್ನು ಘೋಷಣೆ ಕೂಗೂವುದರಲ್ಲಿ ಏನು ತಪ್ಪಿಲ್ಲ. ಆದರೆ ಬೇರೆಯವರನ್ನು ಕೆರಳಿಸುವ ರೀತಿ ಘೋಷಣೆ ಕೂಗಬಾರದು. ಆ ರೀತಿ ಮಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಇನ್ನು ನನಗೆ ಈದ್ ಸದರ್ಶದಲ್ಲಿ ಶುಭಾಶಯದ ರೀತಿ ಜೈ ಶ್ರೀರಾಮ್ ಎಂದು ಸಾವಿರಾರು ಸಂದೇಶಗಳು ಬರುತ್ತಿದ್ದವು. ನಾನು ಅವುಗಳಿಗೆ ಪ್ರತಿಕ್ರಿಯಿಸಲು ಹೋಗಲಿಲ್ಲ. ಶಾಲಾ ದಿನಗಳಲ್ಲೇ ಭಾರತ ಜಾತ್ಯತೀತ ರಾಷ್ಟ್ರ ಎಂದು ಓದಿಕೊಂಡು ಬಂದಿದ್ದೇವೆ. ಅದರಂತೆ ನಾವೆಲ್ಲರೂ ಬದುಕಬೇಕು ಎಂದರು. 
ನಸ್ರುತ್ ಜೈನ ಧರ್ಮೀಯನ್ನು ವಿವಾಹವಾಗಿದ್ದರು. ಇದು ಮುಸ್ಲಿಂ ಧರ್ಮಕ್ಕೆ ವಿರೋಧ ಎಂದು ಹೇಳಿ ಮುಸ್ಲಿಂ ಮೌಲ್ವಿ ಮುಫ್ತಿ ಅಸಾದ್ ವಾಸ್ಮೀ ಫತ್ವಾ ಹೊರಡಿಸಿದ್ದರು. 
SCROLL FOR NEXT