ದೇಶ

ಪ್ರೀತಿಸಿದ ಯುವಕನೊಡನೆ ಕೋರ್ಟಿನಲ್ಲೇ ವಿವಾಹವಾಗಲು ಸಿದ್ದ: ಯುಪಿ ಬಿಜೆಪಿ ಶಾಸಕರ ಪುತ್ರಿ

Raghavendra Adiga
ಲಖನೌ: ಉತ್ತರಪ್ರದೇಶದ ಬಿಜೆಪಿ ಶಾಸಕರ ಪುತ್ರಿ ಸಾಕ್ಷಿ ಮಿಶ್ರಾ ಅವರ ಅಂತರ್ಜಾತಿ ವಿವಾಹ ದೊಡ್ಡ  ವಿವಾದವನ್ನು ಸೃಷ್ಟಿಸಿದ ನಂತರ  ಈಗ ಸಾಕ್ಷಿ ಅವರು ತಾವು ನ್ಯಾಯಾಲಯದಲ್ಲಿ ನೊಂದಾಯಿತ ವಿವಾಹವಾಗಲು ಇಚ್ಚಿಸಿದ್ದಾರೆ.
ಸಾಕ್ಷಿ ಬ್ರಾಹ್ಮಣರಾಗಿದ್ದರೆ, ಪತಿ ಅಜಿತೇಶ್ ಕುಮಾರ್ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಪ್ರಯಾಗರಾಜ್‌ನ ರಾಮ ಜಂಕಿ ದೇವಸ್ಥಾನದ ಅರ್ಚಕರ ಮುಂದೆ ಸಾಕ್ಷಿ ಮಿಶ್ರಾ ಹಾಗೂ ಅಜಿತೇಶ್ ಸಾಂಪ್ರದಾಯಿಕವಾಗಿ ಹಾರಗಳನ್ನು ವಿನಿಮಯ ಂಆಡಿಕೊಂಡು, ಮಾಂಗಲ್ಯ ಧಾರಣೆ ಮಾಡಿಕೊಳ್ಳುವ ಮೂಲಕ ವಿವಾಹವಾಗಿದ್ದಾರೆ. ಇವರ ವಿವಾಹಕ್ಕೆ ಸಾಕ್ಷಿಯಾಗಿ ಪ್ರಮಾಣಪತ್ರವಿದೆ ಎಂದೂ ಹೇಳಲಾಗಿದ್ದು ಈಗ ಆ ಪ್ರಮಾಣ ಪತ್ರ ನಕಲಿ ಎಂದು ವರದಿ ಕೇಳಿಬರುತ್ತಿದೆ.
ಮೂಲಗಳ ಪ್ರಕಾರ, ದಂಪತಿಗಳು ಅಲಹಾಬಾದ್ ಹೈಕೋರ್ಟ್‌ನಲ್ಲಿ ಹಾಜರಾಗಲಿದ್ದು, ಅವರ ಅರ್ಜಿಯನ್ನು ಜುಲೈ 15 ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು."ಜುಲೈ 16 ರಂದು ನ್ಯಾಯಾಲಯಕ್ಕೆ ಮನವಿ ಮಾಡಿದ ನಂತರ ಅವರು ತಮ್ಮ ಮದುವೆಯನ್ನು ನ್ಯಾಯಾಲಯದಲ್ಲಿ ನೊಂದಾಯಿಸಲು ಬಯಸುತ್ತಾರೆ." ದು ಮೂಲಗಳು ತಿಳಿಸಿವೆ.
ಸಾಕ್ಷಿ ಮತ್ತು ಅವರ ಪತಿ ಜುಲೈ 3ರಂದು ಅವರ ಮನೆ ತೊರೆದು ಪಆರಿಯಾದ ನಂತರ ಸುದ್ದಿವಾಹಿನಿಯೊಂದರಲ್ಲಿ ಕಾಣಿಸಿಕೊಂಡಿದ್ದು ಬರೇಲಿಯ ಭಾರತೀಯ ಜನತಾ ಪಕ್ಷದ ಶಾಸಕ ರಾಜೇಶ್ ಮಿಶ್ರಾ ತಮ್ಮ ಮದುವೆಗೆ ವಿರೋಧಿಸಿದ್ದಾರೆ ಎಂದು ಆರೋಪಿಸಿದ್ದರು.ಅಲ್ಲದೆ ಪೋಲೀಸರು ರಕ್ಷಣೆ ನಿಡಬೇಕೆಂದು ಮನವಿ ಮಾಡಿದ್ದರು. ಆದರೆ  ರಕ್ಷಣೆ ಮತ್ತು ಭದ್ರತೆಗಾಗಿ ಮಾಡಿದ ಕರೆಗಳಿಗೆ ಪೋಲೀಸರು ಸ್ಪಂದಿಸಿಲ್ಲ ಎಂದು  ದಂಪತಿ ಮತ್ತು ಅಜಿತೇಶ್ ತಂದೆ ಹರೀಶ್ ಕುಮಾರ್ ಆರೋಪಿಸಿದ್ದಾರೆ. ಇದೀಗ ಸುದ್ದಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ ತರುವಾಯ ಎಸ್‌ಎಸ್‌ಪಿ ದಂಪತಿಗಳಿಗೆ ಸುರಕ್ಷಿತವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಪೊಲೀಸ್ ರಕ್ಷಣೆ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ. 
SCROLL FOR NEXT