ದೇಶ

ಭಾರತ, ಪಾಕಿಸ್ತಾನ ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಕುರಿತ ಮಾತುಕತೆ ಪುನಾರಂಭ

Nagaraja AB
ವಾಘಾ: ಭಾರತ ಹಾಗೂ ಪಾಕಿಸ್ತಾನ ಇಂದು ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಕುರಿತ ಮಾತುಕತೆಯನ್ನು ಪುನಾರಂಭಿಸಿವೆ. ಉಭಯ ದೇಶಗಳ ನಡುವಿನ ಮಾತುಕತೆ ಹಿನ್ನೆಲೆಯಲ್ಲಿ ಭಾರತೀಯ ನಿಯೋಗವು ವಾಘಾ ತಲುಪಿದೆ.
ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಅನ್ನು ತ್ವರಿತವಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಗಡಿಯ ಎರಡು ಬದಿಗಳಲ್ಲಿ ಒಳಗೊಂಡಿರುವ ಮತ್ತು ಕಾರ್ಯನಿರ್ವಹಿಸುತ್ತಿರುವ ವಿವಿಧ ವಿಷಯಗಳ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.
ಭಾರತೀಯ ಯಾತ್ರಾರ್ಥಿಗಳ ಸಾಮಾನ್ಯ ಭದ್ರತೆ ಮತ್ತು ಸುರಕ್ಷತೆ, ಕಾರಿಡಾರ್ ಕುರಿತು ಪಾಕಿಸ್ತಾನದ ಅಧಿಕೃತ ಸಮಿತಿಯಲ್ಲಿ ಖಲಿಸ್ತಾನಿ ಪರ ಅಂಶಗಳ ಸೇರ್ಪಡೆ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ವಿಷಯ ಸೇರಿದಂತೆ ಹಲವಾರು ವಿಷಯಗಳನ್ನು ಭಾರತೀಯ ಅಧಿಕಾರಿಗಳು ಪ್ರಸ್ತಾಪಿಸುವ ನಿರೀಕ್ಷೆಯಿದೆ.
SCROLL FOR NEXT