ದೇಶ

ಪ್ರಯಾಗ್ ರಾಜ್: ನ್ಯಾಯಾಲಯದ ಆವರಣದಿಂದ ಶಾಸಕನ ಪುತ್ರಿ, ಪತಿಯ ಅಪಹರಣ

Raghavendra Adiga
ಪ್ರಯಾಗ್ ರಾಜ್: ದಲಿತ ಯುವಕನನ್ನು ಮದುವೆಯಾಗಿರುವ ್ ಉತ್ತರ ಪ್ರದೇಶ ಬಿಜೆಪಿ ಶಾಸಕನ ಪುತ್ರಿ ಸಾಕ್ಷಿ ಮಿಶ್ರಾ ಹಾಗೂ ಆಕೆಯ ಪತಿ ಅಜಿತೇಶ್ ಕುಮಾರ್ ಅವರನ್ನು ಇಂದು ಬೆಳಿಗ್ಗೆ ಅಲಹಾಬಾದ್ ಹೈಕೋರ್ಟ್ ಆವರಣದ ಹೊರಗೆ ಶಸ್ತ್ರಸಜ್ಜಿತ ವ್ಯಕ್ತಿಗಳು  ಸಿನಿಮೀಯ ಮಾದರಿಯಲ್ಲಿ ಅಪಹರಿಸಿದ್ದಾರೆ. ದಂಪತಿಗಳು ತಮಗೆ ರಕ್ಷಣೆ ನಿಡಬೇಕೆಂದು ಮೊರೆಹೋಗಿದ್ದ ನ್ಯಾಯಾಲಯದ ಆವರಣದಲ್ಲೇ ಈ ಘಟನೆ ನಡೆದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಅವರ ಪುತ್ರಿ ಸಾಕ್ಷಿ ಮಿಶ್ರಾ ಮತ್ತು ಅವರ ಪತಿ ಅಜಿತೇಶ್ ಕುಮಾರ್ ಅವರ ಪ್ರಕರಣವನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ತೆಗೆದುಕೊಳ್ಳುವ ಕೆಲವೇ ಗಂಟೆಗೆ ಮುನ್ನ ಅಂದರೆ ಸೋಮವಾರ ಬೆಳಿಗ್ಗೆ 8.30 ಕ್ಕೆ ಈ ಕೃತ್ಯ ವರದಿಯಾಗಿದೆ. ದಂಪತಿಗಳು 
ಘಟನೆ ವಿವರ
ನ್ಯಾಯಾಲಯದ ಗೇಟ್ ಸಂಖ್ಯೆ 3ರಲ್ಲಿ ಕಾದು ನಿಂತಿದ್ದರು ಆಗ ಅಲ್ಲಿಗೆ ಆಗಮಿಸಿದ್ದ ಕಪ್ಪು ಬಣ್ಣದ ಎಸ್‌ಯುವಿ ಕಾರಿನಿಂದ ಇಳಿದ ವ್ಯಕ್ತಿಗಳು ದಂಪತಿಗಳತ್ತ ಪಿಸ್ತೂಲು ತೋರಿಸಿ ಇಬ್ಬರನ್ನೂ ಕಾರಿನೊಳಗೆ ಎಳೆದುಕೊಂಡಿದ್ದು ಕಾರು ಸಮೇತ ಪರಾರಿಯಾಗಿದ್ದಾರೆ. ಎಸ್‌ಯುವಿ ಆಗ್ರಾ ಜಿಲ್ಲೆಗೆ ಸೇರಿದ ಯುಪಿ 80 ಎಂಬ ನೋಂದಣಿ ಸಂಖ್ಯೆಯನ್ನು ಹೊಂದಿದೆ. ವಾಹನದ ಹಿಂಭಾಗದಲ್ಲಿ 'ಚೇರ್ಮನ್' ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದ್ದು, ವಾಹನಗಳ ತಪಾಸಣೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
ಪ್ರಯಾಗರಾಜ್‌ನ ರಾಮಜಾನಕಿ ದೇವಸ್ಥಾನದಲ್ಲಿ ತಾವು ವಿವಾಹವಾಗಿದ್ದಾಗಿ ಸಾಕ್ಷಿ ಹೇಳಿಕೊಂಡಿದ್ದರೆ ಆ ದೇವಾಲಯದ ಅರ್ಚಕರು ತಾವು ಈ ವಿವಾಹ ನೆರವೇರಿಸಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ತಮ್ಮ ವಿವಾಹಕ್ಕೆ ಪ್ರಮಾಣ ಪತ್ರ ಸಾಕ್ಷಿ ಇದೆ ಎಂದು ಸಾಕ್ಷಿ ಮಿಶ್ರಾ ಹೇಳಿದ್ದು ತಾವು ನ್ಯಾಯಾಲಯದಲ್ಲಿ ಮತ್ತೊಮ್ಮೆ ಅಧಿಕೃತ ವಿವಾಹವಾಗಲು ಇಚ್ಚಿಸುವುದಾಗಿ ಹೇಳಿದ್ದರು.
SCROLL FOR NEXT