ದೇಶ

ಉತ್ತರ ಪ್ರದೇಶ: ಜಾಗದ ವಿಷಯದಲ್ಲಿ ಹರಿಯಿತು ನೆತ್ತರು! 10 ಮಂದಿಗೆ ಗುಂಡಿಕ್ಕಿ ಹತ್ಯೆ, 24 ಜನರಿಗೆ ಗಾಯ

Raghavendra Adiga
ಲಖನೌ: ಭೂವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಹತ್ತು ಮಂದಿಯನ್ನು ಗುಂಡಿಕ್ಕಿ ಕೊಂದು ಇನ್ನೂ  24 ಮಂದಿ ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಸೊನೆಭದ್ರಾ ಜಿಲ್ಲೆಯ ಘೋರಾವಾಲ್ ಪಟ್ಟಣದಲ್ಲಿ ನಡೆದಿದೆ.
"ಸಾವಿನ ಸಂಖ್ಯೆ ನಿಖರವಾಗಿಲ್ಲ, 10 ಜನರನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿದೆ. ಕೆಲವರು ಗಾಯಗೊಂಡಿದ್ದಾರೆ ಮತ್ತು ಕೆಲವರು ಮೃತಪಟ್ಟಿದ್ದಾರೆ" ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಉಲ್ಲೇಖಿಸಿ ಜಿಲ್ಲಾಧಿಕಾರಿ ಅಂಕಿತ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ.
ಗ್ರಾಮ ಪ್ರಧಾನ ಎರಡು ವರ್ಷಗಳ ಹಿಂದೆ 90 ಬಿಗಾ ಭೂಮಿಯನ್ನು ಖರೀದಿಸಿದ್ದರು. ಇಂದು, ಅವರು ತಮ್ಮ ಕೆಲವು ಮಿತ್ರರೊಂದಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಲಲು ಹೋಗಿದ್ದರು. ಆಗ  ಸ್ಥಳೀಯ ಗ್ರಾಮಸ್ಥರು ವಿರೋಧಿಸಿದಾಗ, ಅವರು ಗುಂಡು ಹಾರಿಸಿ ನಾಲ್ಕು ಮಹಿಳೆಯರು ಸೇರಿದಂತೆ ಒಂಬತ್ತು ಗ್ರಾಮಸ್ಥರ ಸಾವಿಗೆ ಕಾರಣರಾದರು. ”ಸ್ಥಳೀಯ ಪ್ರದೇಶದ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆ ಕುರಿತು ಮಾಹಿತಿ ಪಡೆದಿದ್ದು  ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೋನ್‌ಭದ್ರ ಜಿಲ್ಲೆ ಡಿಎಂಗೆ ನಿರ್ದೇಶನ ನೀಡಿದ್ದಾರೆ. ಪ್ರಕರಣವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಅವರು ಡಿಜಿಪಿಗೆ ನಿರ್ದೇಶನ ನೀಡಿದ್ದಾರೆ.
SCROLL FOR NEXT