ದೇಶ

ತಮಿಳುನಾಡಿನಲ್ಲಿ ಕೇಂದ್ರ ಹಿಂದಿ ಹೇರಿಕೆ ಮಾಡುತ್ತಿಲ್ಲ: ನಿರ್ಮಲಾ ಸೀತಾರಾಮನ್

Lingaraj Badiger
ಚೆನ್ನೈ: ಕೇಂದ್ರ ಸರ್ಕಾರ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಮಾಡುವ ಯಾವುದೇ ಪ್ರಯತ್ನ ನಡೆಸಿಲ್ಲ. ಬದಲಾಗಿ ತಮಿಳಿಗೆ ಪ್ರೋತ್ಸಾಹ ನೀಡಲು ಯತ್ನಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರ ಹಿಂದಿ ಹೇರಿಕೆಯ ಭಾಗವಾಗಿ ಅಂಚೆ ಕಚೇರಿಯ ಪರೀಕ್ಷೆಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದೆ ನಡೆಸುತ್ತಿದೆ ಎಂದು ಆರೋಪಿಸಿ ತಮಿಳುನಾಡು ರಾಜಕೀಯ ಪಕ್ಷಗಳು ಇತ್ತೀಚಿಗೆ ಪ್ರತಿಭಟನೆ ನಡೆಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ, ನಮ್ಮ ಗಮನಕ್ಕೆ ಬರದೆ ಅಂತಹ ತಪ್ಪುಗಳು ನಡೆದಿರಬಹುದು. ಆದರೆ ಅದು ಹಿಂದಿ ಹೇರಿಕೆ ಎಂಬ ತೀರ್ಮಾನಕ್ಕೆ ಬರುವುದು ತಪ್ಪು. ಕೇಂದ್ರ ಸರ್ಕಾರ ಹಿಂದೆ ಹೇರಿಕೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಆಡಳಿತದ ಮಟ್ಟದಲ್ಲಿ ಎಲ್ಲೋ ಒಂದು ಕಡೆ ಏನಾದರೂ ನಡೆದರೆ, ಅದು ಹಿಂದಿ ಹೇರಿಕೆ ಎಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಖಂಡಿತವಾಗಿಯೂ ಅದು ಹಿಂದೆ ಹೇರಿಕೆ ಅಲ್ಲ. ನಾವು ಸಹ ತಮಿಳು ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದೇವೆ ಎಂದರು.
ಉತ್ತರ ಭಾರತದಲ್ಲಿ ತಮಿಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ 'ಏಕ್ ಭಾರತ್ ಶ್ರೇಷ್ಠ ಭಾರತ್' ಯೋಜನೆಯನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಸಚಿವೆ ತಿಳಿಸಿದರು.
SCROLL FOR NEXT