ಮೋಹನ್ ಭಾಗವತ್ 
ದೇಶ

ಸಂಸ್ಕೃತ ಕಲಿತಿಲ್ಲದ ಬಗ್ಗೆ ಅಂಬೇಡ್ಕರ್ ಗೂ ವಿಷಾಧವಿತ್ತು- ಆರ್ ಎಸ್ ಎಸ್ ಮುಖ್ಯಸ್ಥ

ಸಂಸ್ಕೃತ ಭಾಷೆ ಗೊತ್ತಿಲ್ಲದೆ ಭಾರತವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ನಾಗಪುರ: ಸಂಸ್ಕೃತ ಭಾಷೆ ಗೊತ್ತಿಲ್ಲದೆ ಭಾರತವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬುಡುಕಟ್ಟು ಸಮುದಾಯದ ಭಾಷೆ ಸೇರಿದಂತೆ ದೇಶದಲ್ಲಿರುವ ಎಲ್ಲಾ ಭಾಷೆಗಳಲ್ಲೂ ಕನಿಷ್ಠ ಅಂದರೂ ಶೇಕಡಾ 30 ರಷ್ಟು ಸಂಸ್ಕೃತ ಪದಗಳಿರುತ್ತವೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಕೂಡ ಸಂಸ್ಕೃತವನ್ನು ಕಲಿಯುವ ಅವಕಾಶ ಸಿಗಲಿಲ್ಲ ಎಂದು ವಿಷಾದಿಸಿದ ಅವರು, ದೇದ ಸಂಪ್ರದಾಯಗಳ ಬಗ್ಗೆ ಕಲಿಯಬೇಕಾಗುತ್ತದೆ ಎಂದರು. 
ದೇಶದಲ್ಲಿನ ಯಾವುದೇ ಭಾಷೆಗಳನ್ನು ಮೂರ್ನಾಲ್ಕು ತಿಂಗಳಲ್ಲಿ ಕಲಿಯಲು ಸಾಧ್ಯವಿಲ್ಲ. ಯಾವುದೇ ಭಾಷೆಗಳನ್ನು ಕಲಿಯಬೇಕಾದರೆ  ಬೇರೆಯವರು ಮಾತನಾಡುವಾಗ ಸ್ವಲ್ವವನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಂತರ ಅರ್ಥ ಮಾಡಿಕೊಳ್ಳಲಾಗುತ್ತದೆ. ಸಂಸ್ಕೃತ ಸಂಪರ್ಕ ಭಾಷೆ ಎಂದು ಹೇಳಿದರು.
ಪ್ರಾಚೀನ ಕಾಲದ ಆಯುರ್ವೇದ, ಕೃಷಿ ಪದ್ಧತಿ ಎಲ್ಲವೂ ಸಂಸ್ಕೃತದಲ್ಲಿದ್ದು, ಆಧುನಿಕ ಪೂರ್ವ ಭಾರತದ ಇತಿಹಾಸವೆಲ್ಲವೂ ಸಂಸ್ಕೃತದಲ್ಲಿಯೇ ಇದೆ. ಆದ್ದರಿಂದ ಸಂಸ್ಕೃತ ಗೊತ್ತಿಲ್ಲದೆ ದೇಶವನ್ನು ಅರ್ಥಮಾಡಿಕೊಳ್ಳುವುದು ಕಷ್ಟು ಅಂಬೇಡ್ಕರ್ ಇದನ್ನು ಹೇಳಿದ್ದರು ಎಂದರು.
ಸಂಸ್ಕೃತ ಕಲಿತಿಲ್ಲದ ಬಗ್ಗೆ ಅಂಬೇಡ್ಕರ್ ಕೂಡಾ ವಿಷಾಧವಿದೆ ಎಂದು ಅಂಬೇಡ್ಕರ್ ಹೇಳಿದ್ದರು. ನಮ್ಮ ದೇಶ, ಜನರು ಹಾಗೂ ಸಂಸ್ಕೃತಿಯನ್ನು ತಿಳಿಯಬೇಕಾದರೆ ಪ್ರತಿಯೊಬ್ಬರು  ಸಂಸ್ಕೃತ ಕಲಿಯಬೇಕಾಗುತ್ತದೆ ಎಂದು ಮೋಹನ್ ಭಾಗವತ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

Dimple Queen: ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! Video ವೈರಲ್

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

CNG ರೀಫಿಲ್ ವೇಳೆ ಭೀಕರ ಸ್ಫೋಟ; NH-48ರಲ್ಲಿ ಭಯಾನಕ ಘಟನೆ, ಬದುಕಿದ್ದೇ ಅಚ್ಚರಿ! Video