ದೇಶ

ಹಾಲಿ ರಾಜ್ಯಪಾಲರ ವರ್ಗ, ನೂತನ ರಾಜ್ಯಪಾಲರ ನೇಮಕ: ಯಾರು ಎಲ್ಲಿಗೆ?: ಇಲ್ಲಿದೆ ವಿವರ

Srinivas Rao BV
ನವದೆಹಲಿ: ಉತ್ತರಪ್ರದೇಶದ ರಾಜ್ಯಪಾಲರಾಗಿ ಆನಂದಿಬೆನ್ ವರ್ಗ, ಮಧ್ಯಪ್ರದೇಶದ ರಾಜ್ಯಪಾಲರಾಗಿ ಲಾಲ್ಜಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 
ರಾಜ್ಯಪಾಲರ ನೇಮಕಾತಿಯಲ್ಲಿ ಭಾರಿ ಬದಲಾವಣೆಗಳಾಗಿದ್ದು, ಒಂದಷ್ಟು ರಾಜ್ಯಪಾಲರನ್ನು ವರ್ಗಾವಣೆ ಮಾಡಿದರೆ ಮತ್ತೊಂದಷ್ಟು ಜನರನ್ನು ಹೊಸದಾಗಿ ನೇಮಕ ಮಾಡಿದ್ದು, ವರದಿಗಳ ಪ್ರಕಾರ ನಾಗಾಲ್ಯಾಂಡ್ ಗೆ ನಿವೃತ್ತ ಗುಪ್ತಚರ ಇಲಾಖೆಯ ವಿಶೇಶ ನಿರ್ದೇಶಕ ಆರ್ ಎನ್ ರವಿ ಅವರನ್ನು ಅಚ್ಚರಿಯ ರೀತಿಯಲ್ಲಿ ನೇಮಕ ಮಾಡಲಾಗಿದೆ. 
ಇನ್ನು ಬಿಹಾರ ರಾಜ್ಯಪಾಲರಾದ ಲಾಲ್ಜಿ ಟಂಡನ್ ಅವರನ್ನು  ಮಧ್ಯಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಜಗದೀಪ್ ದಾಂಖರ್ , ತ್ರಿಪುರಾ ರಾಜ್ಯಪಾಲರಾಗಿ ರಮೇಶ್ ಬಯಾಸ್, ಬಿಹಾರದ ರಾಜ್ಯಪಾಲರಾಗಿ ಫಗು ಚೌಹಾಣ್ ನೇಮಕಗೊಂಡಿದ್ದಾರೆ. 
SCROLL FOR NEXT