ದೇಶ

ಕೊನೆಯ ಕ್ಷಣದವರೆಗೂ ಶೀಲಾ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದರು: ಸೋನಿಯಾ ಭಾವುಕ ಪತ್ರ

Srinivasamurthy VN
ನವದೆಹಲಿ: ಶೀಲಾ ದೀಕ್ಷಿತ್ ತಮ್ಮ ಕೊನೆಯ ಕ್ಷಣದವರೆಗೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದರು. ಶೀಲಾ ನಿಧನದಿಂದ ಪಕ್ಷಕ್ಕೆ ಅಪಾರ ನಷ್ಟವಾಗಿದೆ ಓರ್ವ ಹಿರಿಯಕ್ಕನಂತೆ, ಆತ್ಮೀಯ ಗೆಳತಿಯಂತೆ ಆಕೆ ಸದಾ ನನ್ನ ಬೆಂಬಲಕ್ಕಿದ್ದರು ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹೇಳಿದ್ದಾರೆ.
ನಿನ್ನೆ ದೆಹಲಿಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಶೀಲಾ ದೀಕ್ಷಿತ್ ಅವರು ನಿಧರಾಗಿದ್ದರು. ಈ ಕುರಿತಂತೆ ಶೀಲಾ ಅವರ ಪುತ್ರ ಸಂದೀಪ್ ಅವರಿಗೆ ಭಾವನಾತ್ಮ ಪತ್ರ ಬರೆದಿರುವ ಸೋನಿಯಾ ಗಾಂಧಿ ಅವರು, 'ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಶೀಲಾ ದೀಕ್ಷಿತ್ ಅವರನ್ನು ಎಂದಿಗೂ ಮರೆಯಲಾಗದು. ಶೀಲಾ ಅವರ ನಿಧನದಿಂದ ಪಕ್ಷಕ್ಕೆ ಅಪಾರ ನಷ್ಟವಾಗಿದೆ ಓರ್ವ ಹಿರಿಯಕ್ಕನಂತೆ, ಆತ್ಮೀಯ ಗೆಳತಿಯಂತೆ ಆಕೆ ಸದಾ ನನ್ನ ಬೆಂಬಲಕ್ಕಿದ್ದರು ಅವರನ್ನೂ ಎಂದಿಗೂ ಮರೆಯುವಂತಿಲ್ಲ' ಎಂದು ಪತ್ರದಲ್ಲಿ ಹೇಳಿದ್ದಾರೆ.
ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ನವದೆಹಲಿಯ ಓಖ್ಲಾದ ಫೋರ್ಟಿಸ್ ಎಸ್ಕಾರ್ಟ್ಸ್ ಹೃದ್ರೋಗ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೀಲಾ ದೀಕ್ಷಿತ್ ಶನಿವಾರ ಮಧ್ಯಾಹ್ನ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಶೀಲಾ ದೀಕ್ಷಿತ್ ಅವರು 1998 ರಿಂದ 2013ರ ವರೆಗೆ ದೆಹಲಿಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಈ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರು. ಮೂರು ದಶಕಗಳ ಕಾಲ ದೆಹಲಿ ರಾಜಕಾರಣದಲ್ಲಿ ಪ್ರಾಬಲ್ಯ ಹೊಂದಿದ್ದ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಅತ್ಯಾಪ್ತರಾಗಿದ್ದರು. ಮೃತರ ಗೌರವಾರ್ಥ ದೆಹಲಿಯ ಆಮ್ ಆದ್ಮಿ ಸರ್ಕಾರ 2 ದಿನಗಳ ಶೋಕಾಚರಣೆ ಘೋಷಿಸಿದೆ.
SCROLL FOR NEXT