ದೇಶ

ಚಂದ್ರಯಾನ-2 ಚಂದ್ರನ ದಕ್ಷಿಣ ಧ್ರುವ ತಲುಪುವ ಐತಿಹಾಸಿಕ ಪಯಣ ಆರಂಭ: ಶಿವನ್

Lingaraj Badiger
ಶ್ರೀಹರಿಕೋಟಾ(ಆಂಧ್ರಪ್ರದೇಶ): ಜಿಎಸ್ಎಲ್ ವಿ-ಎಂಕೆಐಐ-ಎಂ1 ಚಂದ್ರಯಾನ್ -2 ಅನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಭಾರತದ ಒಂದು ಐತಿಹಾಸಿಕ ಪ್ರಯಾಣ ಆರಂಭವಾಗಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಅವರು ಸೋಮವಾರ ಹೇಳಿದ್ದಾರೆ.
ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಲ್ಲಿ ಮಧ್ಯಾಹ್ನ 2:43ಕ್ಕೆ ಚಂದ್ರಯಾನ -2ರ ಯಶಸ್ವಿ ಉಡಾವಣೆ ನಂತರ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಭಾರತದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಐತಿಹಾಸಿಕ ದಿನ ಎಂದು ಬಣ್ಣಿಸಿದರು.
ಜಿಎಸ್ಎಲ್ ವಿ-ಎಂಕೆಐಐ-ಎಂ1 ಚಂದ್ರಯಾನ -2 ಉಡಾವಣೆ ಯಶಸ್ವಿಯಾಗಿದೆ ಎಂದು ಹೇಳಲು ಅತ್ಯಂತ ಸಂತಸವಾಗುತ್ತದೆ  ಮುಂದಿನ 48 ದಿನಗಳ ದೀರ್ಘ ಪಯಣದ ಅವಧಿಯಲ್ಲಿ ಒಟ್ಟು 3.44 ಲಕ್ಷ ಕಿಲೋಮೀಟರ್ ದೂರ ಕ್ರಮಿಸಲಿದ್ದು, ಸೆಪ್ಟೆಂಬರ್ 7 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಯಲಿದೆ ಎಂದು ಹೇಳಿದರು.
“ವಾಸ್ತವವಾಗಿ ಇದು ಚಂದ್ರನತ್ತ ಐತಿಹಾಸಿಕ ಪಯಣ. ಚಂದ್ರನ ಮೇಲಿನ ದಕ್ಷಿಣ ಧ್ರುವದ ಮೇಲಿಳಿದು, ಇದುವರೆಗೂ ಅನ್ವೇಷಿಸಿಲ್ಲದ ಅನ್ವೇಷಣೆಯನ್ನು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗುವುದು” ಎಂದರು.
ಗಂಭೀರ ತಾಂತ್ರಿಕ ದೋಷದ ಕಾರಣ ಜುಲೈ 15ರಂದು ನಡೆಸಬೇಕಿದ್ದ ಚಂದ್ರಯಾನ-2ರ ಉಡಾವಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಇಸ್ರೋ ವಿಜ್ಞಾನಿಗಳ ತಂಡವು ಹಾರುವ ಬಣ್ಣಗಳೊಂದಿಗೆ ಪುಟಿದೆದ್ದಿತು ಎಂದು ಕೆ ಶಿವನ್ ಸಂತಸ ವ್ಯಕ್ತಪಡಿಸಿದರು.
SCROLL FOR NEXT