ದೇಶ

ಜಾಗತಿಕ ಆವಿಷ್ಕಾರ ಸೂಚ್ಯಂಕ(ಜಿಐಐ): ಭಾರತದ ಸ್ಥಾನ ಸುಧಾರಣೆ: 57 ರಿಂದ 52 ನೇ ಸ್ಥಾನಕ್ಕೆ ಜಿಗಿತ

Srinivas Rao BV
ನವದೆಹಲಿ: ಜಾಗತಿಕ ಆವಿಷ್ಕಾರ ಸೂಚ್ಯಂಕ(ಜಿಐಐ)ದಲ್ಲಿ ಭಾರತದ ಸ್ಥಾನ ಸುಧಾರಣೆ ಕಂಡಿದ್ದು 57ರಿಂದ 52 ನೇ ಸ್ಥಾನಕ್ಕೆ ಜಿಗಿದಿದೆ. ಜು.24 ರಂದು ಪಟ್ಟಿ ಬಿಡುಗಡೆಯಾಗಿದೆ. ಭಾರತದ ಸಾಧನೆಯ ಬಗ್ಗೆ ಮಾತನಾಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮುಂದಿನ ವರ್ಷಗಳಲ್ಲಿ 25 ನೇ ಸ್ಥಾನಕ್ಕೆ ಏರುವುದು ನಂತರ ಟಾಪ್ 10 ರ ಪಟ್ಟಿಯಲ್ಲಿರುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ. 
5 ವರ್ಷಗಳ ಹಿಂದೆ 81 ನೇ ಸ್ಥಾನದಲ್ಲಿದ್ದ ಭಾರತ ಕಳೆದ ವರ್ಷ 57 ನೇ ಸ್ಥಾನಕ್ಕೇರಿತ್ತು. 5 ವರ್ಷಗಳ ಹಿಂದೆ 16,000 ಪೇಟೆಂಟ್ಗಳನ್ನು ಹೊಂದಿದ್ದೆವು ಈಗ 85,000 ಪೇಟೆಂಟ್ ಗಳನ್ನು ಹೊಂದಿದ್ದೇವೆ. 
ಮುಂದಿನ ದಿನಗಳಲ್ಲಿ ಗ್ರಾಮೀಣ ಭಾರತದ ಆವಿಷ್ಕಾರಗಳನ್ನು ಸಹ ಜಿಐಐ ಅಂಶಕ್ಕೆ ಸೇರಿಸಬೇಕೆಂದು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯುಐಪಿಒ) ಗೆ ಪೀಯೂಷ್ ಗೋಯೆಲ್ ಮನವಿ ಮಾಡಿದ್ದಾರೆ.
SCROLL FOR NEXT