ದೇಶ

ರಾಜೀವ್ ಗಾಂಧಿ ಹಂತಕಿ ನಳಿನಿ ಪೆರೋಲ್ ಮೇಲೆ ಬಿಡುಗಡೆ

Raghavendra Adiga
ಚೆನ್ನೈ: ರಾಜೀವ್ ಗಾಂಧಿ ಹಂತಕಿ ಕಳೆದ 28 ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಅವರಿಗೆ ಮದ್ರಾಸ್ ಹೈಕೋರ್ಟ್ ಇದೇ ಮೊದಲ ಬಾರಿಗೆ  ಒಂದು ತಿಂಗಳ ಪೆರೋಲ್ ನೀಡಿದೆ.
ನಳಿ ತಮ್ಮ ಮಗಳ ವಿವಾಹಕ್ಕಾಗಿ 30 ದಿನಗಳ ಪೆರೋಲ್ ಮೇಲೆ ವೆಲ್ಲೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.ಮಗಳ ಮದುವೆಗೆಂದು ನಳಿನಿ  6 ತಿಂಗಳ ಕಾಲ ಪೆರೋಲ್ ಕೋರಿದ್ದರು. ಆದರೆ ನ್ಯಾಯಾಲಯ ಅವರಿಗೆ 30 ದಿನಗಳ ಕಾಲಾವಕಾಶ ನೀಡಿದೆ.
ಮಗಳ ಮದುವೆಗೆ ವ್ಯವಸ್ಥೆ ಮಾಡಬೇಕೆಂದು ಅದಕ್ಕಾಗಿ ಶಿಕ್ಷೆಗೆ ಈಡಾಗಿರುವ ನನಗೆ ಪರಿಹಾರ ಒದಗಿಸಬೇಕೆಂದು ನಳಿನಿ ನ್ಯಾಯಾಲಯದಲ್ಲಿ ವೈಯಕ್ತಿಕವಾಗಿ ವಾದಿಸಿದ್ದರು. ವಾದ ಆಲಿಸಿದ ನ್ಯಾಯಾಲಯ ಜುಲೈ 5 ರಂದು  ನಳಿನಿ ಅವರಿಗೆ ಒಂದು ತಿಂಗಳ ಪೆರೋಲ್ ನೀಡಿತ್ತು.ಈ 30 ದಿನಗಳಲ್ಲಿ ಯಾವುದೇ ಮಾಧ್ಯಮಗಳನ್ನು ಭೇಟಿಯಾಗಬಾರದು ಅಥವಾ ಮಾತನಾಡಬಾರದು ಎಂದು ನ್ಯಾಯಾಲಯ ನಳಿನಿಗೆ ಆದೇಶಿಸಿದೆ. ಪೆರೋಲ್ ಅವಧಿಗೆ ನ್ಯಾಯಾಲಯವು ನಳಿನಿಗೆ ಮಾರ್ಗಸೂಚಿಗಳನ್ನು ನೀಡಿದೆ.
28 ವರ್ಷಗಳ ಜೈಲುವಾಸದಲ್ಲಿ ನಳಿನಿ ಪೆರೋಲ್‌ನಿಂದ ಹೊರಬರುವುದು ಇದೇ ಮೊದಲು. ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಕೆಗೆ 2016 ರಲ್ಲಿ 12 ಗಂಟೆಗಳ  ಪೆರೋಲ್ ನೀಡಲಾಗಿತ್ತು.ನಳಿನಿಯನ್ನು ಗುರುವಾರ ಬೆಳಿಗ್ಗೆ ವೆಲ್ಲೂರು ಜೈಲಿನಿಂದ ಹೊರಗೆ ಬಿಡಲಾಗಿದೆ. ಜೈಲಿನ ಹೊರಗೆ ಆಕೆ ಸಂಬಂಧಿಯೊಬ್ಬರು ಆಕೆಯನ್ನು ಬರಮಾಡಿಕೊಂಡಿದ್ದಾರೆ. 
SCROLL FOR NEXT