ದೇಶ

ಸಾಮೂಹಿಕ ಹಲ್ಲೆ: 'ಆಯ್ದ ಆಕ್ರೋಶ'ದ ವಿರುದ್ಧ 62 ಸೆಲೆಬ್ರಿಟಿಗಳಿಂದ ಬಹಿರಂಗ ಪತ್ರ

Lingaraj Badiger
ನವದೆಹಲಿ: ಇತ್ತೀಚಿಗೆ ಸಾಮೂಹಿಕ ಹಲ್ಲೆ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿರುವುದನ್ನು ವಿರೋಧಿಸಿ ಬಾಲಿವುಡ್ ನಟಿ ಕಂಗನಾ ರಣಾವತ್‌, ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಹಾಗೂ ಶಾಸ್ತ್ರೀಯ ನೃತ್ಯಗಾರ್ತಿ ಸೊನಾಲ್ ಮಾನ್‌ಸಿಂಗ್ ಸೇರಿದಂತೆ 62 ಸೆಲೆಬ್ರಿಟಿಗಳ ಬಹಿರಂಗ ಪತ್ರ ಬರೆದಿದ್ದಾರೆ.
'ಸುಳ್ಳು ಪ್ರತಿಪಾದನೆ ಮತ್ತು ಆಯ್ದ ಆಕ್ರೋಶ' ಎಂಬ ತಲೆಬರಹದಡಿ ಬಹಿರಂಗ ಪತ್ರ ಬರೆದಿರುವ ಸೆಲೆಬ್ರಿಟಿಗಳು, ದೇಶದಲ್ಲಿ ಕೆಲವೆಡೆ ನಡೆದ ಸಾಮೂಹಿಕ ಹಲ್ಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಕೆಲವು ಸೆಲೆಬ್ರಿಟಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು 'ಹಿಂದುತ್ವ ಕುರಿತು ತಪ್ಪು ಕಲ್ಪನೆ' ಮೂಡುವಂತೆ ಮಾಡಿದ ಘಟನೆ ನಡೆದಿತ್ತು. ಈ ರೀತಿ 'ಆಯ್ದ ಆಕ್ರೋಶ ಮತ್ತು ಕಪೋಲಕಲ್ಪಿತ ಕಥನಗಳ ವಿರುದ್ಧ' ಎಂಬ ಶೀರ್ಷಿಕೆಯ ಪತ್ರದಲ್ಲಿ ಗುಂಪು ಹತ್ಯೆಗಳ ಕುರಿತು 'ಸ್ವಯಂ ಘೋಷಿತ ಪೋಷಕರು ಮತ್ತು ಆತ್ಮಸಾಕ್ಷಿಯ ಪಾಲಕರು' ತಮ್ಮ ರಾಜಕೀಯ ಪೂರ್ವಗ್ರಹಗಳ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದರು ಎಂದು ಆಪಾದಿಸಿದ್ದಾರೆ. 
'ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಜುಲೈ 23ರಂದು ಪ್ರಕಟವಾದ ಪತ್ರ ನಮ್ಮನ್ನು ಬೆರಗುಗೊಳಿಸಿದೆ. 49 ಮಂದಿ ಸ್ವಯಂಘೋಷಿತ 'ಪೋಷಕರು ಮತ್ತು ಆತ್ಮಸಾಕ್ಷಿ ಪಾಲಕರು' ಮತ್ತೊಮ್ಮೆ ಆಯ್ದ ವಿಷಯದಲ್ಲಿ ಮಾತ್ರ ಕಳವಳ ವ್ಯಕ್ತಪಡಿಸಿದ್ದು ತಮ್ಮದು ರಾಜಕೀಯ ಪ್ರೇರಿತ ದೃಷ್ಟಿಕೋನ ಮತ್ತು ಉದ್ದೇಶ' ಎಂಬುದನ್ನು ಸ್ಪಷ್ಟವಾಗಿಯೇ ಘೋಷಿಸಿಕೊಂಡಿದ್ದಾರೆ' ಎಂದು 62 ಸೆಲೆಬ್ರಿಟಿಗಳು ಪತ್ರದಲ್ಲಿ ಹೇಳಿದ್ದಾರೆ.
'ದೇಶದ ಸಂಸ್ಕೃತಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹಾಳುಗೆಡವಲು ಕೆಲವೇ ಕೆಲವು ಆಯ್ದ ಘಟನೆಗಳ ಸಂಗತಿಯನ್ನು ಮಾತ್ರ ಎತ್ತಿಕೊಂಡು ತಪ್ಪಾಗಿ ಬಿಂಬಿಸುವ ದುರುದ್ದೇಶವನ್ನು ವಿಫಲಗೊಳಿಸುವುದೇ ನಮ್ಮ ಉದ್ದೇಶ' ಎಂದು ಅವರು ಹೇಳಿದ್ದಾರೆ.
SCROLL FOR NEXT