ದೇಶ

ಬಿಜೆಪಿ ಮುಖಂಡ ಮುಕುಲ್ ರಾಯ್ ವಿರುದ್ಧ ಬಂಧನ ವಾರಂಟ್

Raghavendra Adiga
ಕೋಲ್ಕತ್ತಾ: ಕಳೆದ ವರ್ಷ ವ್ಯಕ್ತಿಯೊಬ್ಬನಿಂದ ದಾಖಲೆಗಳಿಲ್ಲದ 80 ಲಕ್ಷ ರೂ ಹಣ ವಶಪಡಿಸಿಕೊಂಡಿರುವ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಮುಕುಲ್ ರಾಯ್ ವಿರುದ್ಧ ನಗರದ ಕೆಳ ನ್ಯಾಯಾಲಯವೊಂದು  ಬಂಧನ ವಾರಂಟ್ ಹೊರಡಿಸಿದೆ.
ಬಂಕ್ಷಾಲ್ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸೋಮವಾರ ವಾರಂಟ್ ಹೊರಡಿಸಿದ್ದು, ಒಂದು ತಿಂಗಳೊಳಗೆ ಅಂದರೆ ಆಗಸ್ಟ್ 29 ರೊಳಗೆ ಅದನ್ನು ಜಾರಿಗೆ ತರಲು ಬುರ್ರಾಬಜಾರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮುಂದಿನ ವಿಚಾರಣೆ ಆಗಸ್ಟ್ 29 ರಂದು ನಡೆಸುವುದಾಗಿ ನ್ಯಾಯಾಲಯ ಹೇಳಿದೆ.
ದಾಖಲೆಗಳಿಲ್ಲದ 80 ಲಕ್ಷ ರೂ. ಹೊಂದಿದ್ದಕ್ಕಾಗಿ ಕಲ್ಯಾಣ್ ರಾಜಾ ಎಂಬುವವರನ್ನು ಕಳೆದ ವರ್ಷ ಪೋಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಆ ವೇಳೆ ರಾಜಾ ರಾಯ್ ಹೆಸರನ್ನು ಹೇಳಿದ್ದನೆನ್ನಲಾಗಿದೆ. ಪೊಲೀಸರು ರಾಯ್‌ಗೆ ಸಾಕ್ಷಿಯಾಗಿ ಹಾಜರಾಗುವಂತೆ ಅನೇಕ ನೋಟಿಸ್‌ಗಳನ್ನು ಕಳುಹಿಸಿದರು, ಆದರೆ ದೆಹಲಿಯಲ್ಲಿಯೇ ವಿಚಾರಣೆ ನಡೆಸಬೇಕೆಂದು ರಾಯ್ ಒತ್ತಾಯಿಸಿದ್ದಾರೆ.
ಈ ಬೆಳವಣಿಗೆಗಳ ಕುರಿತು ಪೋಲೀಸರು ನ್ಯಾಯಾಲಯಕ್ಕೆ ವರದಿ ಮಾಡಿದಾಗ ಬಂಕ್ಷಾಲ್  ನ್ಯಾಯಾಲಯ ರಾಯ್ ಅವರಿಗೆ ಸಮನ್ಸ್ ನೀಡಿದೆ. ಆದರೆ ರಾಯ್ ನೋಟಿಸ್ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಜುಲೈ 8 ರಂದು ದೆಹಲಿಯಲ್ಲಿ ರಾಯ್ ಅವರನ್ನು ವಿಚಾರಣೆಗೊಳಿಸುವುದಾಗಿ ಪೊಲೀಸರು ಹೊಸ ಸಮನ್ಸ್ ಜಾರಿಗೊಳಿಸಿದರು. ಆದಾಗ್ಯೂ, ರಾಯ್ ಜುಲೈ 30 ರಂದು ಬೆಳಿಗ್ಗೆ 10 ಗಂಟೆಗೆ ತಮ್ಮ ದೆಹಲಿ ನಿವಾಸಕ್ಕೆ ಬರಲು ಪೊಲೀಸರನ್ನು ಕೇಳಿಕೊಂಡರು. ಇದೀಗ ನ್ಯಾಯಾಲಯ ರಾಯ್ ನೋಟೀಸ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿಲ್ಲ ಎಂದಲ್ಲ ಎಂಬುದಾಗಿ ಹೇಳಿ ಬಂಧನ ವಾರಂಟ್ ಜಾರಿ ಮಾಡಿದೆ.
SCROLL FOR NEXT