ದೇಶ

ಏನಿದು ತ್ರಿವಳಿ ತಲಾಖ್ ಕಾಯ್ದೆ? ಭಾರತದಲ್ಲಿ ಪರ-ವಿರೋಧವೇಕೆ?

Srinivasamurthy VN
ನವದೆಹಲಿ: ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಪತಿಯು ತನ್ನ ಪತ್ನಿಗೆ ಮೂರು ಬಾರಿ ತಲಾಖ್ ಹೇಳುವ ಮೂಲಕ ವಿಚ್ಛೇದನ ನೀಡುವ ಪದ್ಧತಿ ಇದೆ. ಇದನ್ನೇ ತ್ರಿವಳಿ ತಲಾಖ್ ಎನ್ನಲಾಗುತ್ತದೆ.
ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತ್ರಿವಳಿ ತಲಾಖ್​ ಪದ್ಧತಿಗೆ ಸಮ್ಮತಿ ಇದೆ. ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ಕೊಡಬಹುದಾಗಿದೆ. ಇಸ್ಲಾಮ್ ನ ಮೂಲ ಕಾನೂನಿನಲ್ಲಿ ತ್ರಿವಳಿ ತಲಾಖ್ ಗೆ ಬೇರೆಯೇ ವಿಧಿವಿಧಾನಗಳು ಇವೆ. ಆದರೂ ಈಗೀಗ ಈ ಕಾನೂನು ದುರ್ಬಳಕೆಯಾಗಿ ಇನ್ಸ್ ​ಟಂಟ್ ತಲಾಖ್ (ತತ್ ಕ್ಷಣವೇ ನೀಡುವ ವಿಚ್ಛೇದನ) ಆಗಿಬಿಟ್ಟಿದೆ. 
ನಿಂತಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು; ಮೊಬೈಲ್ ಫೋನಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು; ವಾಟ್ಸಾಪ್ ಅಥವಾ ಮೆಸೇಜ್ ಮೂಲಕ ಮೂರು ಬಾರಿ ತಲಾಖ್ ಎಂದು ಹೇಳುವುದು; ಪತ್ರವೊಂದರಲ್ಲಿ ಮೂರು ಬಾರಿ ತಲಾಖ್ ಎಂದು ಬರೆಯುವುದು ಇತ್ಯಾದಿ ಅಕ್ರಮ ತಲಾಖ್ ಪದ್ಧತಿಗಳು ಚಾಲ್ತಿಯಲ್ಲಿವೆ. ಮುಸ್ಲಿಮ್ ಮಹಿಳೆಯರು ತಲಾಖ್ ಗೆ ತುತ್ತಾಗಿ ನಿಕೃಷ್ಟಕ್ಕೊಳಗಾಗುತ್ತಿದ್ದಾರೆನ್ನಲಾಗಿದೆ. 
ಇದೇ ಕಾರಣಕ್ಕೆ ಕೇಂದ್ರದ ಎನ್ ಡಿಎ ಸರ್ಕಾರ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಲು ತೀರ್ಮಾನಿಸಿ ಹೊಸ ಕಾಯ್ದೆ ಜಾರಿಗೆ ತರಲು ಮಸೂದೆ ಹೊರಡಿಸಿತು. ಈ ಮಸೂದೆಯು ಹಲವು ದಿನಗಳ ಬಳಿಕ ಲೋಕಸಭೆಯಲ್ಲಿ ಅನುಮೋದನೆ ಪಡೆದರೂ ರಾಜ್ಯಸಭೆಯಲ್ಲಿ ವಿಫಲವಾಯಿತು. ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಈ ಮಸೂದೆಯನ್ನು ವಿರೋಧಿಸಿವೆ.
SCROLL FOR NEXT