ದೇಶ

ಭಾರಿ ಮಳೆ ಹಿನ್ನೆಲೆ; ಆಗಸ್ಟ್ 4ರವರೆಗೆ ಅಮರನಾಥ ಯಾತ್ರೆ ಸ್ಥಗಿತ

Srinivas Rao BV
ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿನ ಪವಿತ್ರ ಅಮರನಾಥ ಗುಹೆಯ ಯಾತ್ರೆಯನ್ನು ಆಗಸ್ಟ್ 4ರವರೆಗೆ ಸ್ಥಗಿತಗೊಳಿಸಲಾಗಿದೆ. 
ಮುಂದಿನ ಕೆಲ ದಿನಗಳಲ್ಲಿ ಜಮ್ಮು ಕಾಶ್ಮೀರ ರಾಜ್ಯಾದ್ಯಂತ ಭಾರಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಭೂಕುಸಿತ ಹಾಗೂ ಕಲ್ಲುಬಂಡೆಗಳ ಕುಸಿತ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬಲ್ಟಾಲ್ ಹಾಗೂ ನುನ್ವಾನ್ ಪಹಲ್ಗಾಮ್ ಶಿಬಿರದಲ್ಲಿರುವ ಯಾತ್ರಿಕರ ಪಯಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. 
ಈಗಾಗಲೇ ಬಲ್ಟಾಲ್ ಹಾಗೂ ಪಹಲ್ಗಾಮ್ ಮಾರ್ಗಗಳು ಮಳೆಯ ಕಾರಣದಿಂದ ಜಾರುತ್ತಿದ್ದು, ಮುಂದಿನ ದಿನಗಳಲ್ಲಿ ಅದು ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಯಾತ್ರೆಯನ್ನು ಆಗಸ್ಟ್ 4ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
SCROLL FOR NEXT