ದೇಶ

ಪ್ರಧಾನಿ ಮೋದಿ ಜತೆ ಹೋಲಿಕೆ ಮಾಡುವುದು ಸರಿಯಲ್ಲ: ಕೇಂದ್ರ ಸಚಿವ ಪ್ರತಾಪ್ ಸಾರಂಗಿ

Lingaraj Badiger
ನವದೆಹಲಿ: ನನ್ನನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಹೋಲಿಕೆ ಮಾಡುವುದು ಎಂದು ತಮ್ಮ ಸರಳತೆಯಿಂದಲೇ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರು ಹೇಳಿದ್ದಾರೆ.
ಜನ ನನ್ನನ್ನು ಒಡಿಶಾದ ಮೋದಿ ಎಂದು ಏಕೆ ಕರೆಯುತ್ತಿದ್ದಾರೆ ಗೊತ್ತಿಲ್ಲ. ಆದರೆ ಈ ರೀತಿಯ ಹೋಲಿಕೆ ಸರಿಯಲ್ಲ. ಸಾನೊಬ್ಬ ಸಾಮಾನ್ಯ ಮನುಷ್ಯ. ಆದರೆ ಮೋದಿ ಅಸಾಮಾನ್ಯ ಪ್ರತಿಭಾವಂತ ಎಂದು ಸಾರಂಗಿ ಹೇಳಿದ್ದಾರೆ.
ನಾನು ಸಚಿವನಾದರೂ ನನ್ನ ಸ್ವಭಾವ ಅಥವಾ ನಿಲುವುಗಳಲ್ಲಿ ಬದಲಾವಣೆಯಾಗುವುದಿಲ್ಲ. ಇದುವರೆಗೆ ಬದುಕು ಸಾಗಿಸಿದ ರೀತಿಯಲ್ಲೇ ಇನ್ನು ಮುಂದೆಯೂ ಇರುತ್ತೇನೆ ಎಂದು ಸಾರಂಗಿ ತಿಳಿಸಿದ್ದಾರೆ.
64 ವರ್ಷದ ಪ್ರತಾಪ್‌ ಚಂದ್ರ ಸಾರಂಗಿ ಅವರು ಒಡಿಶಾದ ಬಾಲಾಸೋರ್‌ನಿಂದ ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದು, ಮೋದಿ ಸಂಪುಟದಲ್ಲಿ ಪಶು ಸಂಗೋಪನಾ, ಮೀನುಗಾರಿಕೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
'ಒಡಿಶಾದ ಮೋದಿ', 'ನಾನಾ' ಎಂದೇ ಇವರು ಹೆಸರುವಾಸಿ. ಬಾಲ್ಯದಿಂದಲೂ ಆಧ್ಯಾತ್ಮದ ಕಡೆಗೆ ಸೆಳೆತ ಹೊಂದಿದ್ದ ಇವರು, ರಾಮಕೃಷ್ಣ ಮಠದಲ್ಲಿ ಸನ್ಯಾಸಿಯಾಗುವ ಇಚ್ಛೆ ಹೊಂದಿದ್ದರು. ಆದರೆ ತಾಯಿ ಜೀವಂತವಿದ್ದ ಕಾರಣ ಅವರ ನಿರ್ವಹಣೆ ಕರ್ತವ್ಯಕ್ಕೆ ಬದ್ಧರಾಗಿ ಗ್ರಾಮದಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಪ್ರತಾಪ್‌ ಬೆರೆತರು. 
2004, 2009ರಲ್ಲಿ ನಿಲಗಿರಿ ಕ್ಷೇತ್ರದಿಂದ ಶಾಸಕರಾಗಿದ್ದರೂ ತಮಗಾಗಿ ಸ್ವಂತ ಸೂರನ್ನು ಕೂಡ ನಿರ್ಮಿಸಿಕೊಳ್ಳಲಿಲ್ಲ. ಗುಡಿಸಲಿನಲ್ಲಿ ವಾಸಮಾಡಿಕೊಂಡು, ಸೈಕಲ್‌ನಲ್ಲಿ ಸಂಚರಿಸುವ ಪ್ರತಾಪ್‌ ಸರಳತೆಗೆ ಜನಪ್ರಿಯರು. 
SCROLL FOR NEXT