ದೇಶ

ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿ ಉತ್ತರಾಧಿಕಾರಿಯಾಗಲಿ: ಮೋಹನ್ ಭಾಗವತ್ ಟ್ವೀಟ್ ವಿವಾದ

Vishwanath S
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿದ್ದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೋದಿಯ ಉತ್ತರಾಧಿಕಾರಿಯಾಗಲಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದ್ದು ಇದೀಗ ಈ ವಿಚಾರ ವ್ಯಾಪಕ ಚರ್ಚೆಯಾಗುತ್ತಿದೆ.
ಮೋಹನ್ ಭಾಗವತ್ ಅವರು ಎರಡು ಟ್ವೀಟ್ ಮಾಡಿದ್ದಾರೆ. ಮೊದಲ ಟ್ವೀಟ್ ನಲ್ಲಿ ನರೇಂದ್ರ ಮೋದಿ ಅವರ ರಾಜನೈತಿಕ ವಾರಸುದಾರರಾಗಿ ಹಿಂದೂ ಹೃದಯ ಸಾಮ್ರಾಟ ಯೋಗಿ ಆದಿತ್ಯನಾಥ್ ಜೀ ಮಹಾರಾಜ್ ಆಗಬೇಕೆಂಬುದು ನನ್ನ ಅಪೇಕ್ಷೆ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಜೀ ಎರಡನೇ ಅವಧಿಗೆ ಪ್ರಧಾನಿಯಾಗಿದ್ದರೂ ಅಷ್ಟೊಂದು ದುಃಖಪಡದವರಿಗೆ, ಅಮಿತ್ ಶಾ ಅವರು ಗೃಹ ಸಚಿವರಾಗಿರುವುದು ಅತ್ಯಂತ ದುಃಖ ತಂದಿದೆ. ಒಳ್ಳೆಯದೇ ಆಯಿತು ಎಂದು ಭಾಗವತ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಆದರೆ ನಿಜಕ್ಕೂ ಮೋಹನ್ ಭಾಗವತ್ ಅವರ ಅಧಿಕೃತ ಖಾತೆಯ ಟ್ವೀಟ್ ಅಥವಾ ಅವರ ಹೆಸರಲ್ಲಿ ಬೇರಯವರು ನಕಲಿ ಟ್ವೀಟ್ ಮಾಡಿದ್ದಾರೆ ಎಂದು ನೆಟಿಗರು ಚರ್ಚಿಸುತ್ತಿದ್ದಾರೆ.
SCROLL FOR NEXT