ದೇಶ

ಟ್ವಿಟ್ಟರ್ ನಲ್ಲಿರುವ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಿದ ರಮ್ಯಾ, ಸೋಷಿಯಲ್ ಮೀಡಿಯಾ ತೊರೆದರೇ?

Sumana Upadhyaya
ನವದೆಹಲಿ: ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಟ್ವಿಟ್ಟರ್ ತೊರೆದಿದ್ದಾರೆಯೇ ಎಂಬ ಸಂದೇಹ ನಿನ್ನೆಯಿಂದ ಹರಿದಾಡುತ್ತಿದೆ.
ಅವರ ಟ್ವಿಟ್ಟರ್ ಖಾತೆಯಲ್ಲಿ ಯಾವುದೇ ಟ್ವೀಟ್ ಗಳು ಕಾಣಿಸುತ್ತಿಲ್ಲ, ಪುಟವೇ ಇಲ್ಲ ಎಂದು ತೋರಿಸುತ್ತಿದೆ ಮತ್ತು ಅವರ ಟ್ವಿಟ್ಟರ್ ಖಾತೆಯಲ್ಲಿ ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆ ಎಂದು ಸಹ ತೋರಿಸುತ್ತಿಲ್ಲ. ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆಯಾಗಿ ಅವರು ಈಗಲೂ ಇದ್ದಾರೆಯೇ ಅಥವಾ ಹುದ್ದೆ ತೊರೆದಿದ್ದಾರೆಯೇ ಎಂಬ ಸಂದೇಹ, ಸಂಶಯ ಉಂಟಾಗುತ್ತಿದೆ.
ಎಎನ್ಐ ಸುದ್ದಿಸಂಸ್ಥೆ ಅವರನ್ನು ಸಂಪರ್ಕಿಸಿ ಕೇಳಿದಾಗ ಅವರು ಈ ವಿಚಾರವನ್ನು ನಿರಾಕರಿಸಿದ್ದಾರೆ. ನಿಮ್ಮ ಸುದ್ದಿಯ ಮೂಲ ತಪ್ಪಾಗಿದೆ ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಅವರ ಟ್ವಿಟ್ಟರ್ ಖಾತೆ ಅಳಿಸಿ ಹಾಕಿರುವ ಬಗ್ಗೆ ಕಾಂಗ್ರೆಸ್ ನ ಮಾಧ್ಯಮ ವಿಭಾಗ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಸಂಸದರ ವಿರುದ್ಧ ಟ್ವೀಟ್​ ಮಾಡಿ, ಹಲವು ಬಾರಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ರಮ್ಯಾ ದಿಢೀರನೆ ತಮ್ಮ ಟ್ವೀಟರ್​ ಖಾತೆಯನ್ನು ಬ್ಲಾಕ್​ ಮಾಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
SCROLL FOR NEXT