ಸಂಗ್ರಹ ಚಿತ್ರ 
ದೇಶ

ಬೈಕ್ ಸಹಿತ ಬಾವಿಗೆ ಬಿದ್ದ ವ್ಯಕ್ತಿ, 2 ದಿನಗಳ ಬಳಿಕ ಸಾರ್ವಜನಿಕರಿಂದ ರಕ್ಷಣೆ

ರಸ್ತೆಯಲ್ಲಿ ಚಲಿಸುವಾಗ ಆಯತಪ್ಪಿ ಬೈಕ್ ಸಹಿತ ಬಾವಿಯಲ್ಲಿ ಬಿದ್ದಿದ್ದ ದ್ವಿಚಕ್ರ ವಾಹನ ಸವಾರನನ್ನು 2 ದಿನಗಳ ಬಳಿಕ ಸಾರ್ವಜನಿಕರು ರಕ್ಷಿಸಿರುವ ಘಟನೆ ತೆಲಂಗಾಣದಲ್ಲಿ ಶನಿವಾರ ರಾತ್ರಿ ನಡೆದಿದೆ.

ವರಂಗಲ್: ರಸ್ತೆಯಲ್ಲಿ ಚಲಿಸುವಾಗ ಆಯತಪ್ಪಿ ಬೈಕ್ ಸಹಿತ ಬಾವಿಯಲ್ಲಿ ಬಿದ್ದಿದ್ದ ದ್ವಿಚಕ್ರ ವಾಹನ ಸವಾರನನ್ನು 2 ದಿನಗಳ ಬಳಿಕ ಸಾರ್ವಜನಿಕರು ರಕ್ಷಿಸಿರುವ ಘಟನೆ ತೆಲಂಗಾಣದಲ್ಲಿ ಶನಿವಾರ ರಾತ್ರಿ ನಡೆದಿದೆ. 
ತೆಲಂಗಾಣದ ವರಂಗಲ್ ಜಿಲ್ಲೆಯ ಮುಚಾರ್ಲಾ ನಗರಂ ಪ್ರದೇಶದಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ದ್ವಿಚಕ್ರವಾಹನದಲ್ಲಿ ಚಲಿಸುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದಿದ್ದಾನೆ. ಬಿದ್ದ ಕೂಡಲೆ ಆತ ಬಾವಿಯೊಳಗಿನಿಂದಲೇ ಕೂಗಿಕೊಂಡು, ಕಿರುಚಿದರೂ ಯಾರೂ ಕೇಳಿಸಿಕೊಂಡಿರಲಿಲ್ಲ. ಈತ ಬಿದ್ದ ಬಾವಿಯ ಸಮೀಪ ಜನರು ಓಡಾಟ ಅಷ್ಟೇನೂ ಇರಲಿಲ್ಲ. ಹೀಗಾಗಿ ಆತ ಬಾವಿಗೆ ಬಿದ್ದ ವಿಚಾರ ಯಾರ ಗಮನಕ್ಕೂ ಬಂದಿಲ್ಲ.
ಶನಿವಾರ ಸಾರ್ವಜನಿಕರೊಬ್ಬರು ಆ ಬಾವಿಯ ಬಳಿ ಬಂದು ಗಮನಿಸಿದಾಗ ಈತ ಬಾವಿಯಲ್ಲಿ ಬಿದ್ದಿದ್ದು ನರಳಾಡುತ್ತಿದುದು ಕಂಡು ಬಂದಿದೆ. ಕೂಡಲೆ ಆತ ಇತರರಿಗೂ ಮಾಹಿತಿ ನೀಡಿದ್ದು, ಜನರು ಜಮಾಯಿಸಿ ಹಗ್ಗಗಳನ್ನು ಬಳಸಿ ಆತನನ್ನು ಮೇಲೆತ್ತಿದ್ದಾರೆ. ನಂತರ ಬೈಕ್ ಅನ್ನೂ ಹೊರತೆಗೆದಿದ್ದಾರೆ. ಪ್ರಸ್ತುತ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬ್ಯಾಂಕ್ ಮುಷ್ಕರದ ನಡುವೆ ಗ್ರಾಹಕರಿಗೆ ಬಿಗ್ ರಿಲೀಫ್; ಎಟಿಎಂ ವಹಿವಾಟು ಶುಲ್ಕ ಸಂಪೂರ್ಣ ರದ್ದು, ಎಷ್ಟು ಬಾರಿಯಾದರೂ ಉಚಿತವಾಗಿ ಹಣ ಡ್ರಾ ಮಾಡಿ

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ: ಬಿಜೆಪಿ ಶಾಸಕ ಮುನಿರತ್ನರ ಕತ್ತಿನ ಪಟ್ಟಿ ಹಿಡಿದು, ಯುವಕನ ತರಾಟೆ! Video ವೈರಲ್

'ಪದ್ಮಭೂಷಣ ಸಣ್ಣ ವಿಷಯ, ಅವರನ್ನು ಪ್ರಧಾನಿಯನ್ನಾಗಿ ಮಾಡಿ': ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಹೇಳಿಕೆಗೆ ಕಾಂಗ್ರೆಸ್ ಲೇವಡಿ

ಭಾರತದ ಭಜನೆ, ಭಕ್ತಿ ಪರಂಪರೆಗೆ ಅಪಹಾಸ್ಯ: ಜೂನಿಯರ್ ಖರ್ಗೆಯಿಂದ ಇದಕ್ಕಿಂತ ಇನ್ನೇನು ನಿರೀಕ್ಷಿಸಲು ಸಾಧ್ಯ! ಬಿಜೆಪಿ

ಮೊಬೈಲ್‌ನಲ್ಲಿ e-KYC ಮಾಡಿದರೆ ಮಾನ್ಯವಲ್ಲ; Ration Card ಬಳಕೆದಾರಿಗೆ ಆಹಾರ ಇಲಾಖೆ ಖಡಕ್ ಎಚ್ಚರಿಕೆ