ದೇಶ

ಇವಿಎಂಗಳ ಮಾಹಿತಿ ಪತ್ತೆಗೆ ಸತ್ಯಶೋಧನಾ ಸಮಿತಿ ರಚಿಸಬೇಕು- ಮಮತಾ ಬ್ಯಾನರ್ಜಿ

Nagaraja AB

ಕೊಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ಬಳಸಲಾದ ವಿಇಎಂಗಳ ವಿಶ್ವಾಸಾರ್ಹತೆ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದು, ಮತ್ತೆ ಬ್ಯಾಲೆಟ್ ಕಾಗದದಲ್ಲಿ ಚುನಾವಣೆಗಾಗಿ  ಪ್ರತಿಪಕ್ಷಗಳು ಒಗ್ಗಟ್ಟಾಗಿ ಹೋರಾಡುವಂತೆ ಆಗ್ರಹಿಸಿದ್ದಾರೆ.

ಇವಿಎಂಗಳ ಮಾಹಿತಿ ಕಂಡುಹಿಡಿಯಲು ಸತ್ಯ ಶೋಧನಾ ಸಮಿತಿ ರಚಿಸಬೇಕು ಎಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ. ಪ್ರಜಾಪ್ರಭುತ್ವವನ್ನು ನಾವುಗಳು ರಕ್ಷಿಸಬೇಕಾಗಿದೆ. ನಮ್ಮಗೆ ಇವಿಎಂಗಳು ಬೇಡ. ಮತ್ತೆ ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಹೋರಾಡಬೇಕಾಗಿದೆ. ಇದಕ್ಕಾಗಿ ಆಂದೋಲನ ಆರಂಭಿಸುತ್ತೇವೆ. ಬಂಗಾಳದಿಂದಲೇ ಅದು ಪ್ರಾರಂಭವಾಗಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮತ್ತೆ ಬ್ಯಾಲೆಟ್ ಪೇಪರ್ ಚುನಾವಣಾ ವ್ಯವಸ್ಥೆ ಜಾರಿಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡುವಂತೆ 23 ರಾಜಕೀಯ ಪಕ್ಷಗಳಿಗೆ ಹೇಳುತ್ತೇನೆ. ಅಮೆರಿಕಾದಲ್ಲೂ ಕೂಡಾ ಇವಿಎಂಗಳನ್ನು ಬ್ಯಾನ್ ಮಾಡಲಾಗಿದೆ .ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಣ, ತೊಳ್ಬಲ, ಸಾಂವಿಧಾನಿಕ ಸಂಸ್ಥೆಗಳು ಹಾಗೂ  ಮಾಧ್ಯಮಗಳಿಂದ ಗೆಲುವು ಸಾಧಿಸಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿನ 42 ಲೋಕಸಭಾ ಕ್ಷೇತ್ರಗಳ ಪೈಕಿಯಲ್ಲಿ ಬಿಜೆಪಿ 18  ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಎಡಪಕ್ಷಗಳೇ ಕಾರಣ ಎಂದ ಮಮತಾ ಬ್ಯಾನರ್ಜಿ, ಆದರೆ, ಟಿಎಂಸಿಗೆ ಮತ ಹಂಚಿಕೆಯಲ್ಲಿ ಶೇ, 4 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.
SCROLL FOR NEXT