ದೇಶ

ನನ್ನ ಮಗನ ಸೋಲಿನ ಹೊಣೆ ಸಚಿನ್ ಪೈಲಟ್ ಹೊರಬೇಕು: ಅಶೋಕ್ ಗೆಹ್ಲೋಟ್

Shilpa D
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಉಲ್ಬಣಿಸಿದ್ದು, ಸೋಲಿಗೆ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರೇ ಹೊಣೆಯೆಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದೂಷಿಸಿದ್ದಾರೆ. 
ತಮ್ಮ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಜೋಧ್‌ಪುರ ಕ್ಷೇತ್ರದಲ್ಲಿ ವೈಭವ್ ಗೆಹ್ಲೋಟ್ ಸೋಲಿಗೆ ಪೈಲಟ್ ಹೊಣೆ ಎಂದು ಅಶೋಕ್ ಗೆಹ್ಲೋಟ್ ದೂರಿದ್ದಾರೆ. 
ಜೋಝಪುರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ವೈಭವ್ ಹೆಸರನ್ನು ಪೈಲಟ್ ಸೂಚಿಸಿದ್ದರೇ? ಎಂಬ ಪ್ರಶ್ನೆಗೆ, 'ಅವರು (ಪೈಲಟ್) ಅದನ್ನು ಒಪ್ಪಿಕೊಂಡರೆ ಸರಿಯಾಗುತ್ತದೆ. ಇಲ್ಲದಿದ್ದರೆ ನಮ್ಮಿಬ್ಬರ ಮಧ್ಯೆ ಭಿನ್ನಮತವಿದೆ ಎಂಬ ವರದಿಗಳನ್ನು ಅಲ್ಲಗಳೆಯಲಾಗದು' ಎಂದು ಉತ್ತರಿಸಿದರು. 
ಜೋಧ್‌ಪುರದಲ್ಲಿ ನಾವು ಬಹುದೊಡ್ಡ ಅಂತರದಲ್ಲಿ ಗೆಲ್ಲಬಹುದು ಎಂದು ಪೈಲಟ್ ಸಾಬ್ ಹೇಳಿದ್ದರು. ಅಲ್ಲಿ 6 ಶಾಸಕರು ನಮ್ಮ ಪಕ್ಷದವರೇ ಇದ್ದಾರೆ. ಚುನಾವಣೆ ಪ್ರಚಾರ ಕೂಡ ಬಹಳ ಚೆನ್ನಾಗಿಯೇ ನಡೆದಿತ್ತು. ಕನಿಷ್ಠ ಈ ಕ್ಷೇತ್ರದ ಸೋಲಿನ ಹೊಣೆಯನ್ನಾದರೂ ಅವರೇ ಹೊರಬೇಕು. ಜೋಧ್‌ಪುರದಲ್ಲಿ ನಾವ್ಯಾಕೆ ಸೋತೆವು ಎಂಬ ಬಗ್ಗೆ ಸಂಪೂರ್ಣ ಪರಾಮರ್ಶೆ ನಡೆಯಬೇಕಿದೆ ಎಂದು ಸಿಎಂ ಗೆಹ್ಲೋಟ್ ಹೇಳಿದ್ದಾರೆ.. 
1998ರಿಂದಲೂ ಮುಖ್ಯಮಂತ್ರಿ ಗೆಹ್ಲೋಟ್ ಅವರ ಭದ್ರಕೋಟೆ ಎಂದೇ ಪರಿಗಣಿತವಾದ ಸರ್ದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ವೈಭವ್‌ 19,000 ಮತಗಳ ಹಿನ್ನಡೆ ಅನುಭವಿಸಿದ್ದರು. 
SCROLL FOR NEXT