ದೇಶ

ಕಾಶ್ಮೀರ ಕಣಿವೆಯ 10 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ಬಿಡುಗಡೆ

Lingaraj Badiger
ಶ್ರೀನಗರ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಉಗ್ರರನ್ನು ಮಟ್ಟಹಾಕಲು ಭರ್ಜರಿ ಸಿದ್ಧತೆ ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಲ್ಲಿನ 10 ಮೋಸ್ಟ ವಾಂಟೆಡ್ ಉಗ್ರರ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿವೆ.
ಸೇನಾಪಡೆಗಳು ಹಾಗೂ ಸ್ಥಳೀಯ ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದು ಈ ಪಟ್ಟಿ ಸಿದ್ಧಪಡಿಸಲಾಗಿದ್ದು, 2010 ರಿಂದ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಕಣಿವೆಯ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ರಿಯಾಝ್ ಅಹ್ಮದ್ ನಾಯ್ಕು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಕಣಿವೆ ರಾಜ್ಯದಲ್ಲಿ ಈ ವರ್ಷ ಉಗ್ರರ ವಿರುದ್ಧ ನಡೆದ ಕಾರ್ಯಚರಣೆಯಲ್ಲಿ 86 ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (ಗೋ ಸಿ ಇನ್ ಸಿ) ರಣಬೀರ್ ಸಿಂಗ್ ಹೇಳಿದ್ದಾರೆ. "ಈ ವರ್ಷದಲ್ಲಿ ನಾವು 86 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದೇವೆ. 20ಕ್ಕೂ ಅಧಿಕ ಭಯೋತ್ಪಾದಕರನ್ನು ಬಂಧಿಸಲಾಗಿದ್ದು, ಭಯೋತ್ಪಾದಕರ ನಿಗ್ರಹಕ್ಕಾಗಿ ನಮ್ಮ ಕಾರ್ಯಾಚರಣೆ ಮುಂದುವರೆದಿದೆ. ಸದ್ಯ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ತಹಬದಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ, ಇಂದು ದೇಶದ ಆಂತರಿಕ ಭದ್ರತೆಯ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಗೃಹ ಸಚಿವ ಅಮಿತ್‌ ಶಾ ಅವರು ಉಗ್ರರ ಹಿಟ್‌ ಲಿಸ್ಟ್ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ.
ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ
ರಿಯಾಜ್‌ ನಾಯ್ಕು ಅಲಿಯಾಸ್‌ ಮೊಹಮದ್‌ ಬಿನ್‌ ಕಾಸಿಮ್‌ (ಹಿಜ್ಬುಲ್‌ ಮುಜಾಹಿದ್ದೀನ್‌) 
ವಾಸಿಂ ಅಹಮದ್‌ ಅಲಿಯಾಸ್‌ ಒಸಾಮಾ (ಲಷ್ಕರೆ ತಯ್ಬಾ) 
ಮೊಹಮದ್‌ ಅಶ್ರಫ್‌ ಖಾನ್‌ (ಹಿಜ್ಬುಲ್‌) 
ಮೆಹ್ರಾಜ್‌ ಉದ್‌ ದಿನ್‌ (ಹಿಜ್ಬುಲ್) 
ಮೊಹಮದ್‌ ಅಶ್ರಫ್‌ ಖಾನ್‌ (ಹಿಜ್ಬುಲ್‌) 
ಡಾ. ಸೈಫುಲ್ಲಾ (ಹಿಜ್ಬುಲ್‌) 
ಅರ್ಷದ್‌ ಉಲ್‌ ಹಕ್‌ (ಹಿಜ್ಬುಲ್‌) 
ಹಫೀಜ್‌ ಒಮರ್‌ (ಜೈಷೆ ಮೊಹಮದ್‌) 
ಜಹೀದ್‌ ಶೇಖ್‌ (ಜೈಷೆ ಮೊಹಮದ್‌) 
ಜಾವೇದ್‌ ಫೈಸಲ್‌ ಷಕೀಬ್‌ (ಅಲ್‌ ಬದರ್‌) 
ಎಜಾಜ್‌ ಅಹಮದ್‌ ಮಲಿಕ್‌ (ಹಿಜ್ಬುಲ್‌) 
SCROLL FOR NEXT