ದೇಶ

ಏಕಾಂಗಿಯಾಗಿ ಉತ್ತರ ಪ್ರದೇಶ ಉಪ ಚುನಾವಣೆ ಎದುರಿಸಲು ಈಗ ಆರ್ ಎಲ್ ಡಿ ಸಿದ್ಧ!

Sumana Upadhyaya
ಲಕ್ನೊ: ಮುಂಬರುವ 11 ವಿಧಾನಸಭೆ ಉಪ ಚುನಾವಣೆ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ತೀರ್ಮಾನಿಸಿದ ನಂತರ ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ಅವುಗಳ ಮೈತ್ರಿಪಕ್ಷವಾಗಿದ್ದ ಆರ್ ಎಲ್ ಡಿ ಕೂಡ ವಿಧಾನಸಭೆ ಉಪ ಚುನಾವಣೆಯನ್ನು ಏಕಾಂಗಿಯಾಗಿ ಸ್ಪರ್ಧಿಸಲು ನಿಶ್ಚಯಿಸಿದೆ.
ಉತ್ತರ ಪ್ರದೇಶದ ರಾಷ್ಟ್ರೀಯ ಲೋಕದಳ ಅಧ್ಯಕ್ಷ ಮಸೂದ್ ಅಹ್ಮದ್, ಘಟಬಂಧನಕ್ಕೆ ಇದರಿಂದ ಯಾವುದೇ ಅಡ್ಡಿಯುಂಟಾಗುವುದಿಲ್ಲ, ಅದು ಅಖಂಡವಾಗಿರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಯ 11 ಕ್ಷೇತ್ರಗಳ ಉಪ ಚುನಾವಣೆಯನ್ನು ಆರ್ ಎಲ್ ಡಿ ಏಕಾಂಗಿಯಾಗಿ ಎದುರಿಸಲಿದೆ. ಆದರೆ ರಾಜ್ಯದ ರಾಜಕೀಯ ಸ್ಥಿತಿಗತಿ ಬಗ್ಗೆ ಈಗಲೇ ಹೇಳುವುದು ಮತ್ತು ತೀರ್ಮಾನಕ್ಕೆ ಬರುವುದು ಕಷ್ಟ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಎಷ್ಟು ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ಮುಖ್ಯಸ್ಥ ಚೌಧರಿ ಅಜಿತ್ ಸಿಂಗ್ ಮತ್ತು ಜಯಂತ್ ಚೌಧರಿ ನಿರ್ಧರಿಸಲಿದ್ದು ಮುಂದಿನ ಕೆಲ ದಿನಗಳಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದು ಅಹ್ಮದ್ ತಿಳಿಸಿದರು.
SCROLL FOR NEXT