ದೇಶ

ರಾಮ ಮಂದಿರ ಭರವಸೆ ಈಡೇರಿಸದಿದ್ದರೆ ಜನರಿಂದ ಬೂಟಿನೇಟು: ಶಿವಸೇನಾ

Nagaraja AB

ಮುಂಬೈ:  ಈ ಬಾರಿ  ರಾಮ ಮಂದಿರ ನಿರ್ಮಾಣ ಭರವಸೆಯನ್ನು ಈಡೇರಿಸಿದ್ದರೆ ಜನರು ಶೋಗಳಿಂದ ಹಲ್ಲೆ ನಡೆಸುತ್ತಾರೆ ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.

2014ರಲ್ಲಿ ರಾಮ ಮಂದಿರ ನಿರ್ಮಿಸುವ ಭರವಸೆ ನೀಡಿದ್ದೇವು, ಆದರೆ, ಅದನ್ನು ಈಡೇರಿಸಲು ಆಗಲಿಲ್ಲ.ಇತ್ತೀಚಿಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲೂ ರಾಮ ಮಂದಿರ ಹೆಸರಿನಲ್ಲಿಯೇ ಹೋರಾಟ ನಡೆಸಲಾಗಿದೆ.ಚುನಾವಣೆಗೂ ಮುಂಚಿತವಾಗಿ ಶಿವಸೇನೆ ಅಧ್ಯಕ್ಷ ಉದ್ದವ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿದ್ದರು. ರಾಮ ಮಂದಿರ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಈ ಬಾರಿಯಾದರೂ ರಾಮ ಮಂದಿರ ನಿರ್ಮಾಣವಾಗುವ ಭರವಸೆ ಇದೆ. ಒಂದು ವೇಳೆ ರಾಮ ಮಂದಿರ ನಿರ್ಮಾಣವಾಗದಿದ್ದರೆ ಜನರು ಶೋಗಳಿಂದ ತಮ್ಮನ್ನು ಥಳಿಸುತ್ತಾರೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಅವರು ಹೇಳಿಕೆ ನೀಡಿದ್ದಾರೆ.
ಎನ್ ಡಿಎ ಲೋಕಸಭೆಯಲ್ಲಿ 350 ಸೀಟುಗಳನ್ನು ಹೊಂದಿದ್ದು, ಶೀಘ್ರದಲ್ಲಿಯೇ ದೇವಾಲಯ ನಿರ್ಮಾಣವಾಗಲಿದೆ. ಈಗ ಬಿಜೆಪಿಯ 303 ಸಂಸದರು, ಶಿವಸೇನೆ 18, ಸೇರಿದಂತೆ 350ಕ್ಕೂ ಅಧಿಕ ಮಂದಿ ಇದ್ದರೂ ರಾಮ ಮಂದಿರ ನಿರ್ಮಾಣಕ್ಕೆ ಇನ್ನು ಬೇಕು ಎಂದು ಸಂಜಯ್ ರಾವಾತ್   ಪ್ರಶ್ನಿಸಿದರು.
SCROLL FOR NEXT