ದೇಶ

ಪ್ರಶಾಂತ್ ಕಿಶೋರ್- ಮಮತಾ ಭೇಟಿ, ಅಂತರ ಕಾಯ್ದುಕೊಂಡ ಜೆಡಿಯು

Nagaraja AB
ಪಾಟ್ನಾ:  ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಕಾರ್ಯತಂತ್ರ ರೂಪಿಸಲು ಅವಕಾಶ ಪಡೆದಿರುವ ಪ್ರಶಾಂತ್ ಕಿಶೋರ್ ನಿರ್ಧಾರದ ಬಗ್ಗೆ ಜೆಡಿಯು ಅಂತರ ಕಾಯ್ದುಕೊಂಡಿದೆ.
ಪ್ರಶಾಂಕ್ ಕಿಶೋರ್ ನಿರ್ಧಾರಕ್ಕೂ  ಜೆಡಿಯು ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಜೆಡಿಯು ಮುಖಂಡರಾಗಿ ಪಶ್ಚಿಮ ಬಂಗಾಳದಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ  ಕಿಶೋರ್ ಕಾರ್ಯನಿರ್ವಹಿಸುವುದಕ್ಕೆ ಆಗುವುದಿಲ್ಲ ಎಂದು  ಬಿಹಾರ ಮುಖ್ಯಮಂತ್ರಿ ನಿತೀಶ್  ಕುಮಾರ್ ಹೇಳಿದ್ದಾರೆ. 
ವಿವಿಧ ಪಕ್ಷಗಳೊಂದಿಗೆ ಸಂಪರ್ಕದಲ್ಲಿರುವ ಪ್ರಶಾಂತ್ ಕಿಶೋರ್, ಚುನಾವಣಾ ಕಾರ್ಯತಂತ್ರ ಕುರಿತಂತೆ ಸಲಹೆ ನೀಡುತ್ತಿದ್ದಾರೆ. 
ಜೆಡಿಯು ಉಪಾಧ್ಯಕ್ಷರಾಗಿರುವ ಪ್ರಶಾಂತ್ ಕಿಶೋರ್  2021ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷದೊಂದಿಗೆ ಕೆಲಸ ಮಾಡುವ ನಿರ್ಧಾರ ಕುರಿತಂತೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಆದಾಗ್ಯೂ, ಜೆಡಿಯು ಪ್ರಶಾಂತ್ ಕಿಶೋರ್ ಅವರಿಂದ ವಿವರಣೆ ಪಡೆಯಲಿದೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಪ್ರಶಾಂತ್ ಕಿಶೋರ್ ಉತ್ತರ ನೀಡುವ ಭರವಸೆ ಇದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕಿಶೋರ್ ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅವರಿಗೆ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಆದರೆ,ಸಂಸ್ಥೆಯೊಂದರ ಮುಖ್ಯಸ್ಥರಾಗಿರುವ ಪ್ರಶಾಂತ್ ಹಲವು ರಾಜಕೀಯ ಪಕ್ಷಗಳಿಗೆ ಚುನಾವಣಾ ಕಾರ್ಯತಂತ್ರ ಕುರಿತಂತೆ ಸಲಹೆ ನೀಡುತ್ತಿದ್ದಾರೆ. ತನ್ನ ಸಾಮರ್ಥ್ಯದಿಂದಾಗಿ ಹಲವು ರಾಜಕೀಯ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಜೆಡಿಯುಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು  ಅವರು ತಿಳಿಸಿದ್ದಾರೆ.
SCROLL FOR NEXT