ದೇಶ

ಜಗನ್ ಮೋಹನ್ ಆಂಧ್ರ ಗೆಲುವು ರಾಹುಲ್ ಗಾಂಧಿಗೆ ಪ್ರೇರಣೆ: ಶೀಘ್ರವೇ 'ಭಾರತ್ ಯಾತ್ರೆ' ಆರಂಭ?

Sumana Upadhyaya
ನವದೆಹಲಿ: ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸದ್ಯದಲ್ಲಿಯೇ ಜನರ ಜೊತೆ ಸಂಪರ್ಕ ಬೆಳೆಸಲು ಭಾರತ್ ಯಾತ್ರೆ ಹೊರಡಲಿದ್ದಾರೆ. 
ಯಾತ್ರೆ ಹೋಗುವ ವಿಚಾರ ಕಾಂಗ್ರೆಸ್ ನಲ್ಲಿ ಇನ್ನೂ ಮಾತುಕತೆಯ ಹಂತದಲ್ಲಿದ್ದು ದೇಶದ ಅನೇಕ ಸ್ಥಳೀಯ ಕಡೆಗಳಿಗೆ ಹೋಗಿ ಅಲ್ಲಿ ಜನರು ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳು, ಅಲ್ಲಿನ ವಸ್ತುಸ್ಥಿತಿಗಳ ಬಗ್ಗೆ ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಲಿದ್ದಾರೆ.
ರಾಹುಲ್ ಗಾಂಧಿಯವರು ದೇಶಾದ್ಯಂತ ಜನರನ್ನು ಸಂಪರ್ಕ ಸಾಧಿಸಲು ಪ್ರವಾಸ ಮಾಡಲಿದ್ದಾರೆ. ಅದು ಪಾದಯಾತ್ರೆ, ಕಾರಿನಲ್ಲಿ ಸಂಚಾರ ಅಥವಾ ಸಾರ್ವಜನಿಕ ಸಾರಿಗೆಯ ಮೂಲಕ ಆಗಿರಬಹುದು. ಯಾತ್ರೆಯ ಅಂತಿಮ ರೂಪು ರೇಷೆಗಳನ್ನು ಮಾಡಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆಯಲ್ಲಿ ಕಳೆದ ಬಾರಿಯಂತೆ ಈ ವರ್ಷ ಕೂಡ ಸತತವಾಗಿ ಸೋಲನ್ನು ಕಂಡಿರುವುದರಿಂದ ಪಕ್ಷವನ್ನು ಬಲಪಡಿಸಲು ದೇಶದ ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಸಾಮೂಹಿಕ ಸಂಪರ್ಕ ಕಾರ್ಯಕ್ರಮವನ್ನು ರಾಹುಲ್ ಗಾಂಧಿ ಕೈಗೊಳ್ಳಲಿದ್ದಾರೆ.
ಪ್ರವಾಸ ಹೊರಡುವುದಕ್ಕೆ ಮುನ್ನ ತಮ್ಮ ಪಕ್ಷದೊಳಗಿನ ಸ್ಥಿತಿಗತಿಯನ್ನು ಸಹಜ ಸ್ಥಿತಿಗೆ ರಾಹುಲ್ ಗಾಂಧಿ ತರಬೇಕಿದೆ. ಲೋಕಸಭೆ ಚುನಾವಣೆಯ ಸೋಲಿನ ನಂತರ ಪಕ್ಷದಲ್ಲಿ ಕೆಲವರು ಆಂತರಿಕ ಕಲಹ, ಪರಸ್ಪರ ಆರೋಪ, ರಾಜೀನಾಮೆಯಲ್ಲಿ ತೊಡಗಿದ್ದಾರೆ. 
ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗುವುದಕ್ಕೆ ಮುುನ್ನ ವೈ ಎಸ್ ಜಗನ್ ಮೋಹನ್ ರೆಡ್ಡಿ 14 ತಿಂಗಳ ಪ್ರಜಾ ಸಂಕಲ್ಪ ಯಾತ್ರೆ ಕೈಗೊಂಡು ಜನರಿಗೆ ಹತ್ತಿರವಾಗಿ ಈ ಬಾರಿ ಚುನಾವಣೆಯಲ್ಲಿ ಗೆಲುವಿಗೆ ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. 2017ರಲ್ಲಿ ಗುಜರಾತ್ ನಲ್ಲಿ ರಾಹುಲ್ ಗಾಂಧಿ ಪ್ರವಾಸ ಮಾಡಿ ಬಿಜೆಪಿಯೊಂದಿಗೆ ಕಠಿಣ ಸ್ಪರ್ಧೆಯೊಡ್ಡಲು ಸಹಾಯವಾಗಿತ್ತು. 
SCROLL FOR NEXT