ಆದಾಯ ತೆರಿಗೆ ಇಲಾಖೆಯ 12 ಹಿರಿಯ ಅಧಿಕಾರಿಗಳನ್ನು ಕಿತ್ತೊಗೆದ ಕೇಂದ್ರ ಸರ್ಕಾರ!
ನವದೆಹಲಿ: ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯ 12 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ವೃತ್ತಿಗೆ ಸಂಬಂಧಪಟ್ಟಂತೆ ದುರ್ವರ್ತನೆ, ಭ್ರಷ್ಟಾಚಾರದ ಆರೋಪದಲ್ಲಿ ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಜಂಟಿ ಆಯುಕ್ತ ಶ್ರೇಣಿಯ ಅಧಿಕಾರಿಯೂ ಈ ಪೈಕಿ ಇದ್ದು, ಭ್ರಷ್ಟಾಚಾರ, ಉದ್ಯಮಿಯಿಂದ ಸುಲಿಗೆ ಆರೋಪಗಳು ಕೇಳಿಬಂದಿವೆ.
ಕೆಲಸಕ್ಕೆ ಕುತ್ತು ತಂದುಕೊಂಡಿರುವ ಅಧಿಕಾರಿಗಳ ಪೈಕಿ ಐಆರ್ ಎಸ್ ಅಧಿಕಾರಿಯೂ ಇದ್ದು, ಕುಟುಂಬ ಸದಸ್ಯರು ಹಾಗೂ ತನ್ನ ಹೆಸರಿನಲ್ಲಿ 3.17 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಇನ್ನು ಭ್ರಷ್ಟಾಚಾರ ಆರೋಪ ಹೊತ್ತು ಸಿಬಿಐ ತನಿಖೆ ಎದುರಿಸುತ್ತಿದ್ದ, ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಕ್ಕಾಗಿ 2009 ರಲ್ಲೇ ಅಮಾನತುಗೊಂಡಿದ್ದ ಆದಾಯ ತೆರಿಗೆ ಆಯುಕ್ತರೊಬ್ಬರನ್ನೂ ಕೇಂದ್ರ ಸರ್ಕಾರ ಕೆಲಸದಿಂದ ವಜಾಗೊಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics