ದೇಶ

ಎಎನ್ 32 ವಿಮಾನ ಬೆಟ್ಟಕ್ಕೆ ಅಪ್ಪಳಿಸಿ ಅವಘಡವಾಗಿದೆ: ಐಎಎಫ್

Raghavendra Adiga
ನವದೆಹಲಿ: ಜೂನ್ 3ರಂದು ನಾಪತ್ತೆಯಾಗಿದ್ದ ಎಎನ್ 32 ವಿಮಾನವು ಒಂದು ಬೆಟ್ಟಕ್ಕೆ ಅಪ್ಪಳಿಸಿ ಬಿದ್ದಿದೆ, ಆದರೆ ದಟ್ಟ ಮೋಡಗಳಿದ್ದ ಕಾರಣ ಅದರ ಅವಶೇಷಗಳನ್ನು ಪತ್ತೆಮಾಡುವಲ್ಲಿ ಇಷ್ಟು ವಿಳಂಬವಾಗಿದೆ ಎಂದು ಐಎಎಫ್ ಹೇಳಿದೆ.
ಅಪಘಾತ ನಡೆದ ಸ್ಥಳದ ಚಿತ್ರದಲ್ಲಿ ಸಂಭವನೀಯ ಅಪಘಾತದ ಬಿಂದುವನ್ನು ಗುರುತಿಸಲು ಸಾಧ್ಯವಾಗಿದೆ. ವಿಮಾನವು ಬೆಟ್ತಕ್ಕೆ ಎಷ್ಟು ಸಮೀಪದಲ್ಲಿದ್ದರೂ ಸಹ ಮೋಡಗಳಿಂಡಾಗಿ ಡಿಕ್ಕಿಯಾಗುವುದನ್ನು ತಪ್ಪಿಸಲು ಆಗಿರಲಿಲ್ಲ.ಎಂದು ಐಎಎಫ್ ಹೇಳಿದೆ.
ಭಾರತೀಯ ಏರ್ ಫೋರ್ಸ್, ಆರ್ಮಿ ಮತ್ತು ಕೆಲವು ಸಿವಿಲ್ ಪರ್ವತಾರೋಹಿಗಳ ಸಿಬ್ಬಂದಿ ತಂಡ ಬುಧವಾರ ಅರುಣಾಚಲ ಪ್ರದೇಶದಲ್ಲಿ ಎಎನ್ -32 ವಿಮಾನ ಪತನವಾಗಿರುವ ಸ್ಥಳಕ್ಕೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ವಾಯುಪಡೆಯ ಎಎನ್ -32 ವಿಮಾನಭಗ್ನಾವಶೇಷವನ್ನು ಮಂಗಳವಾರ ಭಾರಿ ಅರಣ್ಯದ ಪರ್ವತಮಯ ಭೂಪ್ರದೇಶದಲ್ಲಿ ಐಎಎಫ್ ಎಂಐ -17 ಹೆಲಿಕಾಪ್ಟರ್ ಪತ್ತೆ ಹಚ್ಚಿದೆ, ಎಂಟು ದಿನಗಳ ನಂತರ ನಾಪತ್ತೆಯಾಗಿದ್ದ ವಿಮಾನದ ಅವಶೇಶಗಳು ಪತ್ತೆಯಾಗಿದ್ದು ವಿಮಾನದಲ್ಲಿದ್ದ 13 ಮಂದಿ ಸಾವನ್ನಪ್ಪಿರುವುದು ಖಚಿತಪಟ್ಟಿದೆ.
ಅಸ್ಸಾಂನ ಜೋರ್ಹತ್ ವಾಯುಪಡೆ ನೆಲೆಯಿಂದ ಜೂನ್‌ 3ರಂದು ಮಧ್ಯಾಹ್ನ 12.27ಕ್ಕೆ ಹೊರಟ ವಿಮಾನ ನಾಪತ್ತೆಯಾಗಿತ್ತು. 1.30ಕ್ಕೆ ಮೆಂಚುಕಾ ತಲುಪಬೇಕಿದ್ದ ವಿಮಾನ, ಮಧ್ಯಾಹ್ನ 1.00 ಗಂಟೆಗೆ ಸಂಪರ್ಕ ಕಳೆದುಕೊಂಡಿತ್ತು. ಇದಾಗಿ ಎಂಟು ದಿನಗಳ ನಂತರ ಅರುಣಾಚಲ ಪ್ರದೇಶದ ಟಾಟೋದ ಈಶಾನ್ಯಕ್ಕಿರುವ ಲಿಪೋದ ಉತ್ತರ ಭಾಗಕ್ಕೆ 16 ಕಿ.ಮೀ ದೂರದಲ್ಲಿ ಅವಶೇಷಗಳು ಪತ್ತೆಯಾಗಿವೆ 
SCROLL FOR NEXT