ದೇಶ

ಜಿಡಿಪಿ ಕುರಿತ ಮಾಜಿ ಸಿಇಎ ಹೇಳಿಕೆಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ!

Srinivas Rao BV
ನವದೆಹಲಿ: ದೇಶದ ಜಿಡಿಪಿಯ ಲೆಕ್ಕಾಚಾರದಲ್ಲಿ ಸರಿಯಾದ ವಿಧಾನವನ್ನು ಅನುಸರಿಸಲಾಗಿಲ್ಲ ಎಂಬ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ಅವರ ಹೇಳಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. 
ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಅತಿಶಯವಾಗಿ ಪ್ರಸ್ತುತಪಡಿಸಲಾಗಿದ್ದು, ಸರಿಯಾದ ವಿಧಾನದಲ್ಲಿ ಮಾಪನ ಮಾಡಲಾಗಿಲ್ಲ ಎಂದು ಅರವಿಂದ್ ಸುಬ್ರಹ್ಮಣಿಯನ್ ಹೇಳಿಕೆ ನೀಡಿದ್ದರು. 
ಅರವಿಂದ್ ಸುಬ್ರಹ್ಮಣಿಯನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಂಕಿ-ಅಂಶ ಹಾಗೂ ಯೋಜನಾ ಜಾರಿ ಸಚಿವಾಲಯ, ತಾನು ಬಿಡುಗಡೆ ಮಾಡಿರುವ ಜಿಡಿಪಿ ಅಂದಾಜು ಸೂಕ್ತ ವಿಧಾನದ ಆಧರಿತವಾಗಿಯೇ ಇದೆ ಎಂದು ಹೇಳಿದೆ. 
ಜಿಡಿಪಿ ಮಾಪನ ವಿಧಾನದಲ್ಲಿ ಬದಲಾವಣೆಯಾಗಿದ್ದರಿಂದ ಜಿಡಿಪಿ ಅಂಕಿಗಳ ಮೇಲೆ ಪರಿಣಾಮ ಬೀರಿತ್ತು. ಇದನ್ನು ಸುಬ್ರಹ್ಮಣಿಯನ್ ಪ್ರಶ್ನಿಸಿದ್ದರು. 
SCROLL FOR NEXT