ದೇಶ

ಮೋದಿ ಸರ್ಕಾರದಲ್ಲಿ ರಾಜ್ಯದ ಸಂಸದೆಗೆ ಪ್ರಮುಖ ಹುದ್ದೆ: ಲೋಕಸಭೆ ಮುಖ್ಯ ಸಚೇತಕಿಯಾಗಿ ಶೋಬಾ ಕರಂದ್ಲಾಜೆ ನೇಮಕ

Raghavendra Adiga
ನವದೆಹಲಿ: ಕೇಂದ್ರ ಸಂಪುಟದಲ್ಲಿ ಸ್ಥಾನ ಕೈತಪ್ಪಿದ ಬೇಸರದಲ್ಲಿದ್ದ ಉಡುಪಿ-ಚಿಕ್ಕಮಗಳುರು ಸಂಸದೆ ಶೋಭಾ ಕರಂದ್ಲಾಜೆಗೆ ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಹುದ್ದೆ ನೀಡಿದ್ದಾರೆ. ಶೋಭಾ ಕರಂದ್ಲಾಜೆಯವರನ್ನು ಲೋಕಸಭೆಯ ಮುಖ್ಯ ಸಚೇತಕಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಶೋಭಾ ಕರಂದ್ಲಾಜೆಯವರಿಗೆ ಈ ಬಾರಿಯ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವುದೆಂಬ ನಿರೀಕ್ಷೆ ಇತ್ತು. ಆದರೆ ಮಂತ್ರಿಗಿರಿ ದೊರಕದೆ ನಿರಾಶೆಯಾಗಿತ್ತು. ಈಗ ಮುಖ್ಯ ಸಚೇತಕಿಯಾಗಿ ನೇಮಕವಾಗಿದ್ದಾರೆ.
ಲೋಕಸಭೆ ಮುಖ್ಯ ಸಚೇತಕಿಯಾಗುವ ಮೂಲಕ ಶೊಭಾ ಕರಂದ್ಲಾಜೆ ಮುಂದಿನ ದಿನಗಳಲ್ಲಿ ಸಂಸದರಿಗೆ ವಿಪ್ ಜಾರಿ, ಲೋಕಸಭೆ ನಾಯಕತ್ವದಲ್ಲಿ ಚುನಾವಣೆಗಳು, ರಾಜ್ಯಸಭೆ ಸದಸ್ಯರ ಆಯ್ಕೆ ಸೇರಿ ಅನೇಕ ಮಹತ್ವದ ಕಾರ್ಯಗಳನ್ನು ನಿಭಾಯಿಸಲಿದ್ದಾರೆ.
ಇದಾಗಲೇ ಕೇಂದ್ರದ ಮೋದಿ ಸರ್ಕಾರ ರಾಜ್ಯದಿಂದ ಆಯ್ಕೆಯಾದ ನಾಲ್ವರಿಗೆ ಮಂತ್ರಿ ಸ್ಥಾನ ನಿಡಿದೆ. ಡಿವಿ ಸದಾನಂದಗೌಡ, ಪ್ರಹ್ಲಾದ್ ಜೊಷಿ, ಸುರೇಶ್ ಅಂಗಡಿ ಹಾಗೂ ನಿರ್ಮಲಾ ಸೀತಾರಾಮನ್ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದಾರೆ.
ಇದೀಗ ಸಂಸದೆ ಶೋಭಾ ಅವರಿಗೆ ಮುಖ್ಯ ಸಚೇತಕಿ ಹುದ್ದೆ ನೀಡುವ ಮೂಲಕ ಕೇಂದ್ರ ಸರ್ಕಾರದಲ್ಲಿ ರಾಜ್ಯದವರ ಪಾಲು ಐದಕ್ಕೆ ಏರಿದಂತಾಗಿದೆ. ಆದರೆ ಶೋಭಾ ಅವರಿಗ ನೀಡಿರುವ ಹುದ್ದೆ ಸಂಪುಟಕ್ಕೆ ಸಂಬಂಧಿಸಿಲ್ಲ.
ಇನ್ನು ಕಳೆದ ಬಾರಿ ಮೋದಿ ಸರ್ಕಾರವಿದ್ದಾಗ ಅನುರಾಗ್ ಠಾಕೂರ್ ಅವರು ಲೋಕಸಭೆ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದ್ದರು.
ನಳಿನ್ ಕುಮಾರ್  ಕಟೀಲ್ ಗೆ ಒಲಿದ ಅದೃಷ್ತ

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಿಂದ ಸತತ 3 ಬಾರಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಸಹ ಅದೃಷ್ಟ ಒಲಿದಿದೆ. ಲೋಕಸಭೆಯಲ್ಲಿ ಸಹ ಸಚೇತಕರಾಗಿ ನಳಿನ್ ಕಟೀಲ್ ನೇಮಕವಾಗಿದ್ದಾರೆ. 
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೊಷಿ ಲೋಕಸಭೆ ಅಧಿವೇಶನಕ್ಕಾಗಿ ಸರ್ಕಾರಿ ಸಚೇತಕರಾಗಿ ನೇಮಕವಾಗಿದ್ದಾರೆ.
SCROLL FOR NEXT