ದೇಶ

ಜಾಗತಿಕ ಶಾಂತಿ ಸೂಚ್ಯಂಕ 2019: 5 ಸ್ಥಾನ ಕುಸಿದ ಭಾರತ, 141ನೇ ಸ್ಥಾನ

Srinivasamurthy VN
ವಾಷಿಂಗ್ಟನ್: ಜಾಗತಿಕ ಶಾಂತಿ ಸೂಚ್ಯಂಕ 2019ರ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ಬರೊಬ್ಬರಿ 5 ಸ್ಥಾನ ಕುಸಿತ ಕಂಡಿದೆ.
ಅಂತಾರಾಷ್ಟ್ರೀಯ ಚಿಂತಕರ ಛಾವಡಿ ಜಾಗತಿಕ ಶಾಂತಿ ಸೂಚ್ಯಂಕ 2019ರ ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಭಾರತ ಬರೊಬ್ಬರಿ 5 ಸ್ಥಾನ ಕುಸಿತಕಂಡಿದೆ. ಒಟ್ಟು 163 ರಾಷ್ಟ್ರಗಳ ಪೈಕಿ, ಪ್ರಸ್ತುತ ಭಾರತ 141ನೇ ಸ್ಥಾನದಲ್ಲಿದೆ.
ಇನ್ನು ಈ ಬಾರಿಯೂ ಐಸ್ ಲೆಂಡ್ ದೇಶ ಅಗ್ರ ಸ್ಥಾನದಲ್ಲಿದ್ದು, 1.72 ಅಂಕಗಳನ್ನು ಹೊಂದಿದೆ. ಅಂತೆಯೇ ನ್ಯೂಜಿಲೆಂಡ್ 2ನೇ ಸ್ಥಾನದಲ್ಲಿದ್ದು, 1.221 ಅಂಕಗಳನ್ನು ಹೊಂದಿದೆ. 1.27 ಅಂಕಗಳೊಂದಿಗೆ ಪೋರ್ಚುಗಲ್ 3ನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿರುವ ಪ್ರತೀ ರಾಷ್ಟ್ರಗಳ ಆಂತರಿಕ ಮತ್ತು ಬಾಹ್ಯ ಸಂಘರ್ಷ, ಮಿಲಿಟರಿ ಸಾಮರ್ಥ್ಯ, ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಆಯಾ ರಾಷ್ಟ್ರಗಳಿಗೆ 1 ರಿಂದ ಐದು ಅಂಕ ನೀಡಲಾಗುತ್ತದೆ. ಈ ಪೈಕಿ 1 ಅತ್ಯುತ್ತಮ ಎಂದೂ 5 ಅತ್ಯಂತ ಕಳಪೆ ಎಂದು ಪರಿಗಣಿಸಲಾಗುತ್ತದೆ. 
ಈ ಪಟ್ಟಿಯಲ್ಲಿ ಭಾರತ 2.605 ಅಂಕಗಳೊಂದಿಗೆ 141ನೇ ಸ್ಥಾನದಲ್ಲಿದೆ. 3.095 ಅಂಕಗಳೊಂದಿಗೆ ರಷ್ಯಾ 154ನೇ ಸ್ಥಾನದಲ್ಲಿದೆ. ಇನ್ನು 3.574 ಅಂಕಗಳೊಂದಿಗೆ ಆಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದೆ.
SCROLL FOR NEXT