ದೇಶ

ಜೆಇಇ ಅಡ್ವಾನ್ಸ್ ಫಲಿತಾಂಶ: ಮಹಾರಾಷ್ಟ್ರದ ಕಾರ್ತಿಕೇಯ್ ರಾಷ್ಟಕ್ಕೆ ಟಾಪರ್

Raghavendra Adiga
ನವದೆಹಲಿ: ಜೆಇಇ ಅಡ್ವಾನ್ಸ್ಡ್2019ರ ಸಾಲಿನ ಫಲಿತಾಂಶ ಪ್ರಕಟವಾಗಿದ್ದು  ಮಹಾರಾಷ್ಟ್ರದ ಕಾರ್ತಿಕೇಯ್ ಗುಪ್ತಾ ಚಂದ್ರೇಶ್ ಅಗ್ರಸ್ಥಾನ ಪಡೆದಿದ್ದಾರೆ.

ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಗಳಿಗೆ ಪ್ರವೇಶ ಪಡೆಯಲಿಕ್ಕಾಗಿ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ

ಐಐಟಿ ರೂರ್ಕಿ ಈ ಬಾರಿ ಜೆಇಇ ಅಡ್ವಾನ್ಸ್ ಪರೀಕ್ಷೆಗಳನ್ನು ಆಯೋಜಿಸಿತ್ತು. ದೇಶ, ವಿದೇಶಗಳ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 23 ಐಐಟಿಗಳಲ್ಲಿ ಸುಮಾರು 11,279 ಸೀಟುಗಳಿಗಾಗಿ ಪರೀಕ್ಷೆ ನಡೆದಿತ್ತು.

ಐಐಟಿಗಳಲ್ಲಿ ಪ್ರವೇಶ ಪಡೆಯುವುದರ ಹೊರತಾಗಿ, ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಟೆಕ್ನಾಲಜಿ, ರಾಯ್ ಬರೇಲಿ  (ಆರ್ಜಿಐಪಿಟಿ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು (ಐಐಎಸ್ಸಿ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ (ಐಐಎಸ್ಟಿ) ಮತ್ತು ಆರು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್ಸಿಆರ್೦ ನಲ್ಲಿ ಸಹ ಪ್ರವೇಶಕ್ಕಾಗಿ ಪರೀಕ್ಷೆ ನಡೆದಿದೆ.

ಜೆಇಇ ಅಡ್ವಾನ್ಸ್ಡ್ ಫಲಿತಾಂಶದ ನಂತರ ಜಂಟಿ ಸೀಟ್ ಅಲೋಕೇಷನ್ ಅಥಾರಿಟಿ (ಜೋಎಸ್ಎಎ) ಸಮಾಲೋಚನಾ ದಿನಾಂಕಗಳನ್ನು ಘೋಷಿಸುತ್ತದೆ. ಜೆಇಇಎ 2019 ಅಂಕಗಳ ಆಧಾರದ ಮೇಲೆ ಎನ್ಐಟಿಗಳು ಮತ್ತು ಐಐಐಟಿಗಳಿಗೆ ಕೌನ್ಸಿಲಿಂಗ್ ನಡೆಸಲಾಗುತ್ತದೆ.

ಪರೀಕ್ಷೆ ಬರೆದ ಅಭ್ಯರ್ಥಿಗಳು jeeadv.ac.in ಜಾಲತಾಣಕ್ಕೆ ಪ್ರವೇಶಿಸಿ ಫಲಿತಾಂಶ ವೀಕ್ಷಿಸಬಹುದು.
SCROLL FOR NEXT