ದೇಶ

ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಿದ್ದೇವೆ, ಸೇವೆಗೆ ಮರಳಿ ಬನ್ನಿ: ಮುಷ್ಕರನಿರತ ವೈದ್ಯರಿಗೆ ಮಮತಾ ಬ್ಯಾನರ್ಜಿ ಮನವಿ

Raghavendra Adiga
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಷ್ಕರ ನಡೆಸುತ್ತಿರುವ ವೈದ್ಯರ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದ್ದೇವೆ.ಅವರು ಮತ್ತೆ ಸೇವೆಗೆ ಮರಳಿದರೆ  ಹೆಚ್ಚಿನದನ್ನು ಕೊಡಲು ಸಿದ್ದರಿದ್ದೇವೆ ಎಂದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಶನಿವಾರ ಹೇಳಿದೆ.
ಕಿರಿಯ ವೈದ್ಯರ ಐದು ದಿನಗಳ ಮುಷ್ಕರದ ನಂತರವೂ ನಾವು ಎಸ್ಮಾ ಕಾಯ್ದೆ ಜಾರಿ ಮಾಡಿಲ್ಲ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಎಂ ಹೇಳಿದರು.
"ನಾನು ನನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದೇನೆ ಮತ್ತು ಕಿರಿಯ ವೈದ್ಯರು ಸಭೆಯಲ್ಲಿ ಪಾಲ್ಗೊಳ್ಳಲು ಕಾಯುತ್ತಿದ್ದೇನೆ  ಅವರು ಸಾಂವಿಧಾನಿಕ ಸಂಸ್ಥೆಗೆ ಗೌರವ ತೋರಿಸಬೇಕು" ಎಂದು ಬ್ಯಾನರ್ಜಿ ಹೇಳಿದರು.
ಏತನ್ಮಧ್ಯೆ, ಕೇಂದ್ರ ಸರ್ಕಾರವು ರಾಜ್ಯದಿಂದ ವರದಿ ಕೇಳಿದೆ ಎಂದು ಮೂಲಗಳು ಹೇಳಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಓರ್ವ ರೋಗಿಯ ಕುಟುಂಬವು ಪಶ್ಚಿಮ ಬಂಗಾಳದ ಇಬ್ಬರು ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದ ಬಳಿಕ ಸೋಮವಾರದಿಂದ ವೈದ್ಯರ ಮುಷ್ಕರ ಪ್ರಾರಂಭವಾಗಿದ್ದು ಇದು ಕೇವಲ ಆರಾಜ್ಯಕ್ಕಷ್ಟೇ ಸೀಮಿತವಾಗದೆ ಇತರೆ ರಾಜ್ಯಗಳಿಗೂ ಹಬ್ಬಿದೆ.
SCROLL FOR NEXT