ದೆಹಲಿ: ಎರಡನೇ ಬಾರಿ ದೇಶದ ಪ್ರಧಾನಿ ಗದ್ದುಗೆ ಅಲಂಕರಿಸಿರುವ ನರೇಂದ್ರ ಮೋದಿ ಮತ್ತೆ ಮನ್ ಕೀ ಬಾತ್ ಆರಂಭಿಸಲಿದ್ದಾರೆ.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿಯವರು ಅಕ್ಟೋಬರ್ನಲ್ಲಿ ಮನ್ ಕೀ ಬಾತ್ ಎಂಬ ವಿನೂತನ ಕಾರ್ಯಕ್ರಮ ಪ್ರಾರಂಭಿಸಿದ್ದರು. ತಿಂಗಳಿಗೊಮ್ಮೆ ಆಕಾಶವಾಣಿ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಜೂನ್ 30 ಬೆಳಗ್ಗೆ 11 ಗಂಟೆಗೆ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ಆರಂಭವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ನಮೋ ಆ್ಯಪ್ ಒಪನ್ ಪೋರಂ ನಲ್ಲಿ ಮನ್ ಕೀ ಬಾತ್ ಬಗ್ಗೆ ಚರ್ಚಿಸಬಹುದಾಗಿದೆ ಎಂದು ಮೋದಿ ಟ್ವೀಟ್ ಮಾಡಿಜದ್ದಾರೆ.
ಪ್ರಸಕ್ತ ವರ್ಷದ ಫೆಬ್ರುವರಿಯಲ್ಲಿ ಆಡಳಿತದ ಕೊನೆಯ ಮತ್ತು 53ನೇ ಮನ್ ಕೀ ಬಾತ್ ನಡೆಸಿ ಮುಕ್ತಾಯಗೊಳಿಸಿದ್ದರು. ದೇಶದ ಅನೇಕಾನಕ ಜನರ ಮನಗೆದ್ದ ಈ ಮನ್ ಕೀ ಬಾತ್ ಅನ್ನು ಮೋದಿಯವರು ಮತ್ತೆ ಈ ಬಾರಿ ಕೂಡ ನಡೆಸಲಿದ್ದು ಜೂನ್ 30ರಂದು ಎರಡನೇ ಆವೃತ್ತಿಯ ಮೊದಲ ಕಾರ್ಯಕ್ರಮವಿದೆ.
ನರೇಂದ್ರ ಮೋದಿಯವರು ದೇಶದ ಜನರಿಗೆ ಸಂಬಂಧಪಟ್ಟ ಸಮಸ್ಯೆಗಳು, ವಿಚಾರಗಳ ಬಗ್ಗೆ ಮನ್ ಕೀ ಬಾತ್ದಲ್ಲಿ ಮಾತನಾಡಲಿದ್ದಾರೆ. ಹಾಗೇ ಅವರು ಯಾವ ವಿಷಯದ ಬಗ್ಗೆ ಮಾತನಾಡಬಹುದು ಎಂದು ಜನರೂ ಕೂಡ ತಿಳಿಸಬಹುದು. ಅದಕ್ಕೆ ಸಂಬಂಧಪಟ್ಟಂತೆ ಜೂ.11ರಿಂದ 26ರ ವರೆಗೆ ದೂರವಾಣಿ ಸಂಖ್ಯೆ 1800-11-7800ಗೆ ಕರೆ ಮಾಡಬಹುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos