Contaminated water forces UP family to seek PM's nod to end life
ಹಥ್ರಾಸ್: ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ ನಿರಂತರ ಕಲುಶಿತ ನೀರು ಪೂರೈಕೆಯಿಂದ ಬೇಸತ್ತ ರೈತ ಕುಟುಂಬ, ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಅರ್ಜಿ ಸಲ್ಲಿಸಿದೆ.
ಪೂರೈಕೆಯಾಗುತ್ತಿರುವ ಕುಡಿಯುವ ನೀರು ತೀವ್ರವಾಗಿ ಕಲುಶಿತಗೊಂಡ ಹಿನ್ನೆಲೆಯಲ್ಲಿ ಮೂವರು ಪುತ್ರಿ ಹಾಗೂ ತಂದೆಯಿರುವ ಕುಟುಂಬ ಪ್ರಧಾನಿಗೆ ಪತ್ರ ಬರೆದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದೆ.
"ನಾವು ವಾಸ ಮಾಡುತ್ತಿರುವ ಪ್ರದೇಶದಲ್ಲಿ ನೀರಿನಲ್ಲಿ ಉಪ್ಪಿನ ಅಂಶ ಹೆಚ್ಚಾಗಿದೆ. ಸಮಸ್ಯೆ ಬಗೆಹರಿಸುವುದಕ್ಕೆ ಸರ್ಕಾರಿ ಕಚೇರಿಗಳಿಗೆ ತಿರುಗುತ್ತೇನೆ ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನೀರನ್ನು ಕುಡಿಯುವುದಕ್ಕೆ ನಮಗೆ ಸಾಧ್ಯವಾಗುತಿಲ್ಲ, ಈ ನೀರಿನಿಂದ ಬೆಳೆಗಳೂ ಹಾಳಾಗುತ್ತಿವೆ. ಬಾಟಲ್ ನೀರನ್ನು ಪ್ರತಿ ನಿತ್ಯ ಕೊಳ್ಳುವಷ್ಟು ಆರ್ಥಿಕ ಶಕ್ತಿ ನಮ್ಮಲ್ಲಿ ಇಲ್ಲ. ಈ ಕಾರಣಕ್ಕಾಗಿ ನಾವು ನಮ್ಮ ಜೀವ ಕಳೆದುಕೊಳ್ಳುವುದಕ್ಕೆ ತೀರ್ಮಾನಿಸಿದ್ದೇವೆ, ದಯಾಮರಣ ಕೋರಿ ಪ್ರಧಾನಿಗೆ ಪತ್ರಬರೆದಿದ್ದೇವೆ ಎಂದು ಚಂದ್ರಪಾಲ್ ಸಿಂಗ್ ಹೇಳಿದ್ದಾರೆ.
ಸ್ಥಳೀಯರೂ ಸಹ ಇದೇ ಸಮಸ್ಯೆ ಎದುರಿಸುತ್ತಿದ್ದು, ಬಳಕೆಗೆ ಯೋಗ್ಯವಾದ ನೀರನ್ನು ತರಲು 3-4 ಕಿಮೀ ನಡೆದು ಹೋಗಬೇಕಾದ ಪರಿಸ್ಥಿತಿ ಇದೆ.