ದೇಶ

'ಜೈ ಶ್ರೀರಾಮ್'ಗೆ ಪ್ರತಿಯಾಗಿ 'ಜೈ ಭೀಮ್‌, ತಕ್ಬೀರ್‌, ಅಲ್ಲಾ ಹು ಅಕ್ಬರ್‌' ಘೋಷಣೆ ಕೂಗಿದ ಓವೈಸಿ

Lingaraj Badiger
ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಬಿಜೆಪಿ ಸಂಸದರು ಜೈ ಶ್ರೀರಾಮ್, ಭಾರತ್‌ ಮಾತಾ ಕೀ ಜೈ , ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. 
ಹೈದರಾಬಾದ್ ಸಂಸದ ಓವೈಸಿ ಅವರು ಪ್ರಮಾಣವಚನ ಸ್ವೀಕರಿಸಲು ಸ್ಪೀಕರ್ ಮುಂದಿನ ಸದನ ಬಾವಿಗೆ ಬರುತ್ತಿದ್ದಂತೆ ಆಡಳಿತ ಪಕ್ಷದ ಸಂಸದರು ಜೈ ಶ್ರೀರಾಮ್, ಭಾರತ್‌ ಮಾತಾ ಕೀ ಜೈ , ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಆಗ ಓವೈಸಿ ಕೂಗಿರಿ, ಕೂಗಿರಿ ಎಂದು ಹೇಳುತ್ತಲೆ ಮೈಕ್ ಬಳಿಗೆ ಬಂದು ಪ್ರಮಾಣವಚನ ಸ್ವೀಕರಿಸಿದರು. ಅಲ್ಲದೆ ಕೊನೆಯಲ್ಲಿ 'ಜೈ ಭೀಮ್‌... ಜೈ ಭೀಮ್‌, ತಕ್ಬೀರ್‌, ಅಲ್ಲಾ ಹು ಅಕ್ಬರ್‌, ಜೈ ಹಿಂದ್‌,' ಎಂದು ಘೋಷಣೆ ಕೂಗಿ ಹಿಂದಿರುಗಿದರು. ಓವೈಸಿ ಅವರ ಈ ಘೋಷಣೆಯನ್ನೂ ಕೆಲ ಸಂಸದರು ಅಣಕಿಸಿದರು. 'ಓ...,' ಎಂದು ಕೂಗಿದರು.
ಬಳಿಕ ಸಂಸತ್‌ನ ಹೊರಗೆ ಮಾತನಾಡಿದ ಅಸಾದುದ್ದೀನ್‌ ಓವೈಸಿ, ಇದು ಒಳ್ಳೆಯ ವಿಚಾರ ಯಾಕೆಂದರೆ ಅವರಿಗೆ ನನ್ನನ್ನು ನೋಡಿದ ತಕ್ಷಣ ಈ ವಿಚಾರಗಳು ನೆನಪಾಗುತ್ತವೆ. ಅವರಿಗೆ ಸಂವಿಧಾನ ಮತ್ತು ಮುಜಾಫ‌ರಪುರ್‌ನಲ್ಲಿ ಮಕ್ಕಳ ಸಾವಿನ ವಿಚಾರಗಳು ನೆನಪಿನಲ್ಲಿವೆ ಎಂದು ಭಾವಿಸುತ್ತೇನೆ ಎಂದರು.
SCROLL FOR NEXT