ದೇಶ

ಆದಿತ್ಯನಾಥ್ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ: ನೋಯ್ಡಾ ಮೂಲದ ಟಿವಿ ಪತ್ರಕರ್ತರಿಗೆ ಜಾಮೀನು

Raghavendra Adiga
ನೋಯ್ಡಾ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಮಾನಹಾನಿಕಾರಕ ಸುದ್ದಿ ಪ್ರಸಾರ ಮಾಡಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟ ನೋಯ್ಡಾ ಮೂಲದ ಟಿವಿ ಸುದ್ದಿ ವಾಹಿನಿಯ ಮೂವರು ಪತ್ರಕರ್ತರಿಗೆ ಸ್ಥಳೀಯ ನ್ಯಾಯಾಲಯವು  ಜಾಮೀನು ನೀಡಿದೆ.
ಮಾನನಷ್ಟ ಪ್ರಕರಣದಲ್ಲಿ ಬಂಧಿಗಳಾಗಿದ್ದ ಮೂವರು ಟಿವಿ ಪತ್ರಕರ್ತರಿಗೆ ನ್ಯಾಯಾಲಯ ಜಾಮೀನು ನೀಡಿದ್ದಾಗಿ ಅವರ ಪರ ವಕೀಲರು ಹೇಳಿದ್ದಾರೆ.
ಆದರೆ, ನೇಷನ್ ಲೈವ್ ಲೇಖಕರಾದ ಇಶಿಕಾ ಸಿಂಗ್, ಅನುಜ್ ಶುಕ್ಲಾ ಮತ್ತು ಅನ್ಶುಲ್ ಕೌಶಿಕ್ ವಿರಿದ್ಧ ಇನ್ನೂ ಬಾಕಿ ಉಳಿದಿರುವ ವಂಚನೆ ಮತ್ತು ಖೋಟಾ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ  ಜೈಲಿನಿಂದ ಬಿಡುಗಡೆ ಮಾಡಲಾಗಿಲ್ಲ ಎಂದು ವಕೀಲರು ತಿಳಿಸಿದ್ದಾರೆ.
ಸಿಂಗ್ ಮತ್ತು ಶುಕ್ಲಾ ಅವರನ್ನು ಜೂನ್ 8 ರಂದು ಬಂಧಿಸಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಚಾನೆಲ್ ಆದಿತ್ಯನಾಥ್ ಬಗೆಗೆ  ವಿವಾದಾತ್ಮಕ ವಿಷಯವನ್ನು ಪ್ರಸಾರ ಮಾಡಿದ ಎರಡು ದಿನಗಳ ನಂತರ. ಅವರ ಬಂಧನವಾಗಿತ್ತು. ಇದೇ ಪ್ರಕರಣದಲ್ಲಿ ಜೂನ್ 10 ರ ರಾತ್ರಿ ಕೌಶಿಕ್ ಅವರನ್ನು ಬಂಧಿಸಲಾಯಿತು.
SCROLL FOR NEXT