ದೇಶ

ತೆಲಂಗಾಣದ ಈ ರೈತನ ಮನೆಯಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ನಡೆಯುತ್ತೆ ನಿತ್ಯಪೂಜೆ!

Raghavendra Adiga
ಹೈದರಾಬಾದ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಆ ದೇಶದಲ್ಲಿ ಹಾಗೆಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅಭಿಮಾನಿಗಳಿರುವುದು ಸಾಮಾನ್ಯ. ಆದರೆ ಭಾರತದ ತೆಲಂಗಾಣದಲ್ಲೊಬ್ಬ ಟ್ರಂಪ್ ಅಭಿಮಾನಿ ಇದ್ದು ಅವರು ತಮ್ಮ ಮನೆಯಲ್ಲೇ ಟ್ರಂಪ್ ಪ್ರತಿಮೆ ಸ್ಥಾಪಿಸಿ ದೇವರಂತೆ ಪೂಜಿಸುತ್ತಿದ್ದಾರೆಂದರೆ ನಂಬುವಿರಾ?
ಡೊನಾಲ್ಡ್ ಟ್ರಂಪ್ ಅವರ "ಬಲವಾದ ನಾಯಕತ್ವ" ಮತ್ತು "ದಿಟ್ಟ ವರ್ತನೆ" ಗಾಗಿ ಮಾರುಹೋದ ತೆಲುಗಿನ ಅಭಿಮಾನಿಯೊಬ್ಬರು  ಮನೆಯಲ್ಲಿ ಯುಎಸ್ ಅಧ್ಯಕ್ಷರ ಆರು ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸುತ್ತಿದ್ದಾರೆ.
 ಜಂಗಾಂವ್ ಜಿಲ್ಲೆಯ ಕೊನ್ನೆ ಗ್ರಾಮದ 32 ವರ್ಷದ ರೈತ ಬುಸ್ಸಾ ಕೃಷ್ಣ ಟ್ರಂಪ್ ಪ್ರತಿಮೆಯನ್ನು ಸ್ಥಾಪಿಸಿದ್ದಲ್ಲದೆ ಅದಕ್ಕೆ ತಿಲಕ' ಹಚ್ಚಿ "ಅಭಿಷೇಕ ನೆರವೇರಿಸಿ ಹೂಮಾಲೆ ಹಾಕಿ ಪೂಜಿಸುತ್ತಿದ್ದಾರೆ.  "ಜೈ ಜೈ ಟ್ರಂಪ್" ಎಂದು ಜಪಿಸುವ ಮೂಲಕ "ಆರತಿ".ಬೆಳಗುತ್ತಿದ್ದಾರೆ.
ಟ್ರಂಪ್ ಅವರು ಪ್ರಬಲ ನಾಯಕ ಮತ್ತು ಅವರ ದಿಟ್ಟ ಮನೋಭಾವ ನನಗಿಷ್ಟ ಎನ್ನುವ ಕೃಷ್ಣ ಜೀವನದಲ್ಲೊಮ್ಮೆ ಟ್ರಂಪ್ ಅವರನ್ನು ಭೇಟಿ ಮಾಡಲು ಬಯಸುತ್ತೇನೆ  ಎನ್ನುತ್ತಾರೆ.
1.3 ಲಕ್ಷ ರೂ. ಖರ್ಚು ಮಾಡಿ ಈ ಪ್ರತಿಮೆ ನಿರ್ಮಿಸಿರುವ ಕೃಷ್ಣ ಪ್ರತಿಮೆ ಉದ್ಘಾಟನೆ ದಿನ ಮಸ್ಥರಿಗೆ ಹಬ್ಬವನ್ನು ಸಹ ಆಯೋಜಿಸಿದ್ದಾರೆ ಎಂದು ಅವರ ತಾಯಿ ಹೇಳಿದರು. ಜೂನ್ 14 ರಂದು, ಟ್ರಂಪ್ ತಮ್ಮ 73 ನೇ ಹುಟ್ಟುಹಬ್ಬವನ್ನು ಆಚರಿಸಿದಾಗ, ಕೃಷ್ಣ ಅವರು ಅಮೆರಿಕದ ಅಧ್ಯಕ್ಷರ ಪೋಸ್ಟರ್ ಅನ್ನು ತಮ್ಮ ಮನೆಯ ಹೊರಗೆ ಅಂಟಿಸಿ ಸಂಭ್ರಮಿಸಿದ್ದರು.
SCROLL FOR NEXT