ದೇಶ

ಕೆಆರ್ ಎಸ್ ಡ್ಯಾಂನಿಂದ ಮಂಡ್ಯ ಜಿಲ್ಲೆಗೆ 2 ಟಿಎಂಸಿ ನೀರು ಬಿಡುವಂತೆ ಶೇಖಾವತ್, ಕಾವೇರಿ ಜಲ ನಿರ್ವಹಣಾ ಮಂಡಳಿಗೆ ಡಿವಿಎಸ್ ಪತ್ರ

Nagaraja AB
ನವದೆಹಲಿ: ಮಂಡ್ಯ ಜಿಲ್ಲೆಗೆ ಕೆಆರ್ ಎಸ್ ಜಲಾಶಯದಿಂದ 2 ಟಿಎಂಸಿ ನೀರು ಬಿಡುವಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಹಾಗೂ ಕಾವೇರಿ ಜಲ ನಿರ್ವಹಣಾ ಮಂಡಳಿ ಅಧ್ಯಕ್ಷ ಮಸೂದ್ ಹುಸೇನ್ ಅವರಿಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಪತ್ರ ಬರೆದಿದ್ದಾರೆ.
ಮಂಡ್ಯ ಜಿಲ್ಲೆಯ ರೈತರು ನೀರಿಲ್ಲದೆ ಸಂಕಷ್ಟದಲ್ಲಿದ್ದು, ಬೆಳೆದು ನಿಂತ ಪೈರನ್ನು ಉಳಿಸಿಕೊಳ್ಳಲು ತಕ್ಷಣ 2 ಟಿಎಂಸಿ ನೀರನ್ನು ಕೆಆರ್ ಎಸ್ ಜಲಾಶಯದಿಂದ ಹರಿಸುವಂತೆ ಸಂಸದೆ ಸುಮಲತಾ ಅಂಬರೀಷ್ ಹಾಗೂ ಸಣ್ಣ ನೀರಾವರಿ ಸಚಿವ ಎಸ್ . ಪುಟ್ಟರಾಜು ತಮ್ಮ ಬಳಿ  ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಈ ಸಂಬಂಧ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಹಾಗೂ ಕಾವೇರಿ ಜಲ ನಿರ್ವಹಣಾ ಮಂಡಳಿ ಅಧ್ಯಕ್ಷ ಮಸೂದ್ ಹುಸೇನ್ ವರಿಗೆ ಪತ್ರ ಬರೆದಿದ್ದು, ಬೆಳೆಗೆ ನೀರು ಕೇಳುತ್ತಿರುವ ರೈತರ ಪರವಾಗಿ ನಿರ್ಧಾರ ತೆಗೆದುಕೊಂಡು 2 ಟಿಎಂಸಿ ನೀರನ್ನು ಮಂಡ್ಯ ಜಿಲ್ಲೆಗೆ ಹರಿಸುವಂತೆ ಕೇಳಿಕೊಂಡಿರುವುದಾಗಿ ಸದಾನಂದಗೌಡ ಹೇಳಿದ್ದಾರೆ.
SCROLL FOR NEXT