ಹೆಣ್ಣೆಂಬ ಕಾರಣಕ್ಕೆ ತಂದೆಯೇ 3 ತಿಂಗಳ ಮಗಳನ್ನು ನೆಲಕ್ಕಪ್ಪಳಿಸಿ ಕೊಂದ!
ಕೋಲ್ಕತ್ತಾ: ಹೆಣ್ಣೆಂಬ ಕಾರಣಕ್ಕೆ ಮೂರೂವರೆ ತಿಂಗಳ ಎಳೆಯ ಮಗುವನ್ನು ಅದರ ತಂದೆಯೇ ಕೊಂದಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಮಗುವನ್ನು ಪದೇ ಪದೇ ನೆಲಕ್ಕೆ ಅಪ್ಪಳಿಸಿದ್ದಲ್ಲದೆ ಅದರ ತೋಳನ್ನು ,ಮುರಿದು ಮುಖವನ್ನು ವಿರೂಪಗೊಳಿಸಿರುವುದಾಗಿ ಪೋಲೀಸರು ಹೇಳಿದ್ದಾರೆ.
"ಕೋಲ್ ಬರ್ತ್ ರಸ್ತೆಯ ನಿವಾಸಿಯಾದ ಸೈಕ್ ರಾಜು (25) ಅವರ ಪತ್ನಿ ಅಫ್ಸಾರಿ ಬೇಗಂ ಈ ಸಂಬಂಧ ಬುಧವಾರ ಪೋಲೀಸರಿಗೆ ದೂರಿತ್ತ ನಂತರ ಆತನನ್ನು ಬಂಧಿಸಲಾಗಿದೆ.ಮೃತ ಶಿಶುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ದಕ್ಷಿಣ ಬಂದರು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಆತ ಅಸಮಾಧಾನಹೊಂದಿದ್ದನೆನ್ನಲಾಗಿದೆ.ಅಲ್ಲದೆ ಈ ಕಾರಣಕ್ಕಾಗಿ ಆರೋಪಿ ತನ್ನ ಪತ್ನಿಯೊಡನೆ ಜಗಳವಾಡಿದ್ದಾನೆ. ದೂರಿನ ಪ್ರಕಾರ, ರಾಜು ಹೆಣ್ಣು ಮಗುವನ್ನು ಹಲವು ಬಾರಿ ನೆಲಕ್ಕೆ ಎಸೆದದ್ದು ಮಾತರವಲ್ಲದೆ ಮಗುವಿನ ಕೈಗಳನ್ನು ತಿರುಚಿ ಮುಖಕ್ಕೆ ಗಾಯ ಮಾಡಿದ್ದಾನೆ. ಆಗ ಅಲ್ಲೇ ಇದ್ದ ಬೇಗಂ ಪ್ರತಿರೋಧದ ಹೊರತಾಗಿಯೂ ಆರೋಪಿ ಮಗುವನ್ನು ಕೊಂದಿದ್ದಾನೆ.
ಮರಣೋತ್ತರ ವರದಿಗಳು ಬಂದ ನಂತರ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಪೋಲೀಸ್ ಮೂಲಗಳು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics