ದೇಶ

ತರಬೇತಿ ವಿಮಾನ ಖರೀದಿಯಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ; ವಾಯುಪಡೆ ಅಧಿಕಾರಿಗಳ ವಿರುದ್ಧ ಸಿಬಿಐ ಚಾರ್ಜ್‌ಶೀಟ್

Srinivasamurthy VN
ನವದೆಹಲಿ: ತರಬೇತಿ ವಿಮಾನ ಖರೀದಿಯಲ್ಲಿ ದೊಡ್ಡ ಮಟ್ಟದ ಕಿಕ್ ಬ್ಯಾಕ್ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಭಾರತೀಯ ವಾಯುಸೇನೆಯ ಅಧಿಕಾರಿಗಳ ವಿರುದ್ಧ ಚಾರ್ಚ್ ಶೀಟ್ ದಾಖಲಿಸಿದ್ದಾರೆ.
ಮೂಲಗಳ ಪ್ರಕಾರ, ಸ್ವಿಡ್ಜರ್ಲೆಂಡ್ ಮೂಲದ ಕಂಪನಿಯಿಂದ ಭಾರತೀಯ ವಾಯುಪಡೆಯು 75 ತರಬೇತಿ ವಿಮಾನಗಳನ್ನು ಖರೀದಿಸಿದ ಪ್ರಕರಣದಲ್ಲಿ ಸುಮಾರು 339 ಕೋಟಿ ರೂ. ಲಂಚ (ಕಿಕ್‌ಬ್ಯಾಕ್) ಪಡೆದ ಆರೋಪದ ಮೇಲೆ ವಾಯುಪಡೆ ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿ ಚಾಕ್ಜ್ ಶೀಟ್ ಕೂಡ ದಾಖಲಿಸಿದೆ ಎಂದು ತಿಳಿದುಬಂದಿದೆ. ಎಫ್‌ಐಆರ್ ನಲ್ಲಿ ಸಿಬಿಐ ಭಂಡಾರಿ ಮಾಲೀಕತ್ವದ ಆಫ್‌ಸೆಟ್ ಇಂಡಿಯಾ ಸಲ್ಯೂಷನ್ಸ್‌ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯನ್ನೂ ಉಲ್ಲೇಖಿಸಿದೆ. 
ಸುದ್ದಿಸಂಸ್ಥೆಯಲ್ಲಿನ ವರದಿಯನ್ವಯ ಸಿಬಿಐ ಚಾರ್ಚ್ ಶೀಟ್ ನಲ್ಲಿ ಶಸ್ತ್ರಾಸ್ತ್ರ ದಲ್ಲಾಳಿ ಎಂದು ಹೇಳಲಾಗಿರುವ ಸಂಜಯ್ ಭಂಡಾರಿ ಮತ್ತು ಸ್ವಿಡ್ಜರ್ಲೆಂಡ್ ಮೂಲದ ವಿಮಾನ ತಯಾರಿಕಾ ಸಂಸ್ಥೆ ಪೈಲಟಸ್ ಏರ್‌ಕ್ರಾಫ್ಟ್‌ ಲಿಮಿಟೆಡ್‌ನ ಅಧಿಕಾರಿಗಳನ್ನೂ ಪ್ರಕರಣದಲ್ಲಿ ದೋಷಿಗಳೆಂದು ಉಲ್ಲೇಖಿಸಲಾಗಿದೆ. ಇದೇ ಶುಕ್ರವಾರ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು ದೆಹಲಿಯಲ್ಲಿನ ಭಂಡಾರಿ ಮಾಲೀಕತ್ವದ ಆಸ್ತಿಗಳ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. 
ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಮೇ 2012ರಲ್ಲಿ ₹2,896 ಕೋಟೆ ವೆಚ್ಚದಲ್ಲಿ ಸ್ವಿಡ್ಜರ್ಲೆಂಡ್‌ನಿಂದ 75 ತರಬೇತಿ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. ವಾಯುಪಡೆಗೆ ಹೊಸದಾಗಿ ಸೇರಿದವರಿಗೆ ತರಬೇತಿ ನೀಡಲು ಈ ತರಬೇತಿ ವಿಮಾನಗಳನ್ನು ಬಳಸಲಾಗುತ್ತದೆ. ಹಲವು ಬಾರಿ ಅಪಘಾತಕ್ಕೀಡಾದ ದೇಶೀಯ ಎಚ್‌ಟಿಪಿ–32 ತರಬೇತಿ ವಿಮಾನಗಳ ಬದಲಿಗೆ ಸ್ವಿಡ್ಜರ್ಲೆಂಡ್‌ನಿಂದ ಪೈಲಟಸ್ ‘ಪಿಸಿ–7 ಮಾರ್ಕ್ 2’ ಮಾದರಿಯ ವಿಮಾನಗಳನ್ನು ಖರೀದಿಸಲು ವಾಯುಪಡೆ ನಿರ್ಧರಿಸಿತ್ತು.
SCROLL FOR NEXT