ದೇಶ

ರಾಜಸ್ಥಾನ: ಟಿಕ್ ಟಾಕ್ ವಿಡಿಯೋ ಚಾಲೆಂಜ್ ಮಾಡಲು ಹೋದ ಬಾಲಕ ಆತ್ಮಹತ್ಯೆ

Nagaraja AB
ಕೊಟಾ: ಮೊಬೈಲ್ ಆ್ಯಪ್ ಟಿಕ್ ಟಾಕ್ ನಲ್ಲಿ  ವಿಡಿಯೋ ಚಾಲೆಂಜ್ ಮಾಡಲು ಹೋಗಿ 
  12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೊಟಾದಲ್ಲಿ  ನಡೆದಿದೆ.
ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಲು ಹೋದ ಬಾಲಕ ತನನ್ನು ತಾನೇ ಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.
ಬಾಲಕ ನೇಣು ಬಿಗಿದುಕೊಳ್ಳುವುದಕ್ಕೂ ಮುನ್ನ ಮಂಗಳಸೂತ್ರವನ್ನು ಧರಿಸಿ, ಕೈಗೆ ಬಳೆಗಳನ್ನು ಹಾಕಿಕೊಂಡಿದ್ದಾನೆ. ಬಳಿಕ ದಪ್ಪವಾದ ಲೋಕದ ಸರಪಳಿಯಿಂದ ಸ್ನಾನ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ನಾನಗೃಹದ ಛಾವಣಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಆತ ರಾತ್ರಿಯಿಡೀ ಟಿಕ್ ಟಾಕ್ ಬಳಸುತ್ತಿದ್ದ ಎಂದು ಬಾಲಕನ ಕುಟುಂಬ ಸದಸ್ಯರು ಹೇಳಿದ್ದಾರೆ. 
ಟಿಕ್ ಟಾಕ್ ಮಾಡದಿದ್ದರೆ ನನ್ನ ಮಗ ಜೀವಂತವಾಗಿ ಇರುತಿದ್ದ ಎಂದ ನೊಂದ ಬಾಲಕನ ತಂದೆ ಕಣ್ಣಿರಿಟ್ಟಿದ್ದಾರೆ.  ಬಾಲಕನನ್ನು ಆಸ್ಪತ್ರೆಗೆ ತಂದ ನಂತರ ಮೃತಪಟ್ಟನೆಂದು ಘೋಷಿಸಲಾಗಿದ್ದು, ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
SCROLL FOR NEXT