ದೇಶ

ಬಿಎಸ್ ಪಿಯಲ್ಲಿ ಸಂಬಂಧಿಕರಿಗೆ ಪ್ರಮುಖ ಹುದ್ದೆ ನೀಡಿದ ಮಾಯಾವತಿ

Nagaraja AB
ಲಖನೌ: ಕಾಂಗ್ರೆಸ್ ಹಾಗೂ ಬಿಜೆಪಿ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುತ್ತಿವೆ ಎಂದು ವಾಗ್ದಾಳಿ ನಡೆಸುವ ಬಿಎಸ್ ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಇದೀಗ ಆದೇ ಹಾದಿಯಲ್ಲಿ ಸಾಗಿದ್ದು, ಪಕ್ಷದ ಪ್ರಮುಖ ಹುದ್ದೆಗಳಿಗೆ  ತಮ್ಮ ಸಂಬಂಧಿಕರನ್ನು ನೇಮಕ ಮಾಡಿದ್ದಾರೆ.
ಲೋಕಸಭೆಯ ನಾಯಕರನ್ನಾಗಿ ಡ್ಯಾನಿಷ್ ಆಲಿ ಅವರನ್ನು ಆಯ್ಕೆ ಮಾಡಲಾಗಿದ್ದು, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಸಹೋದರ ಆನಂದ್ ಕುಮಾರ್ ಹಾಗೂ ರಾಷ್ಟ್ರೀಯ ಸಂಚಾಲಕರನ್ನಾಗಿ ಸೋದರ ಸಂಬಂಧಿ ಆಕಾಶ್ ಕುಮಾರ್ ಅವರನ್ನು ನೇಮಕ ಮಾಡಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
ಅಮೋರಾ ಸಂಸದ ಡ್ಯಾನಿಷ್ ಅಲಿ ಅವರನ್ನು ಲೋಕಸಭೆಯ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ನಗಿನಾ ಮೀಸಲು ಕ್ಷೇತ್ರದ ಸಂಸದ ಗಿರೀಶ್ ಚಂದ್ರ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌದರಿ, ಇದು ಬಿಎಸ್ ಪಿಯ ಆಂತರಿಕ ವಿಷಯ ಎಂದಿದ್ದಾರೆ.
ಡ್ಯಾನಿಷ್ ಆಲಿ ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರಿಗೆ ಆಪ್ತರಾಗಿದ್ದಾರೆ. 
SCROLL FOR NEXT