ದೇಶ

ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಮರಳಿದಾಗ ಗುಜರಾತ್ ಮತ್ತು ಕರ್ನಾಟಕದಲ್ಲಿ ಜಾತಿ ಹುಡುಕಿದ್ರು!

Vishwanath S
ಬೆಂಗಳೂರು: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ಕಪಿಮುಷ್ಠಿಯಿಂದ ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಆಗಿದ್ದು ದೇಶದ ಜನರು ಸಂಭ್ರಮದಲ್ಲಿದ್ದರು. ಆದರೆ ಗುಜರಾತ್ ಮತ್ತು ಕರ್ನಾಟಕದಲ್ಲಿ ಮಾತ್ರ ಅಭಿನಂದನ್ ಅವರದ್ದು ಜಾತಿ ಎಂಬ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ.
ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನ್ ಅವರ ಪರ ಜೈಕಾರಗಳು ಸ್ಟೇಟಸ್ ಗಳಾಗಿ ಟ್ವೀಟ್ ಗಳಾಗಿ ಮೂಡಿಬಂದರೆ. ಇತ್ತ ಗೂಗಲ್ ನಲ್ಲಿ ಅಭಿನಂದನ್ ಹೆಸರು ಟ್ರೆಂಡಿಂಗ್ ಆಗಿತ್ತು. ಅದರಲ್ಲಿಯೂ ಅಭಿನಂದನ್ ವರ್ಧಮಾನ್ ಅವರ ಜಾತಿ ಯಾವುದು ಎಂದು ಗೂಗಲಿಸಿದವರ ಸಂಖ್ಯೆಯೇನೂ ಕಮ್ಮಿಯಿಲ್ಲ.
ಗೂಗಲ್ ಸರ್ಚ್ ಬಾರ್ ನಲ್ಲಿ ವರ್ಧಮಾನ್ ಎಂದು ಟೈಪಿಸಿದರೆ ಮೊದಲ ಪದ ಸಲಹೆ ವರ್ಧಮಾನ್ ಜಾತಿ ಎಂದು ಬರುತ್ತದೆ. ಕಳೆದ ಒಂದು ದಿನದ ಗೂಗಲ್ ಟ್ರೆಂಡ್ ನೋಡಿದರೆ ಶುಕ್ರವಾರ ಹೆಚ್ಚು ಮಂದಿ ವರ್ಧಮಾನ್ ಅವರು ಜಾತಿ ಹುಡುಕಿದ್ದಾರೆ.
ಅಭಿನಂದನ್ ವರ್ಧಮಾನ್ ಜಾತಿ ಹುಡುಕಿದವರಲ್ಲಿ ಗುಜರಾತ್ ಮಂದಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಾರ್ಚ್ 1 ಶುಕ್ರವಾರ ರಾತ್ರಿ 9.30ರ ಹೊತ್ತಿಗೆ ಅತೀ ಹೆಚ್ಚು ಮಂದಿ ಗೂಗಲ್ ನಲ್ಲಿ ವರ್ಧಮಾನ್ ಅವರ ಜಾತಿ ಹುಡುಕಿದ್ದಾರೆ. ಅಂದೆರ ವರ್ಧಮಾನ್ ಪಾಕ್ ವಶದಿಂದ ಮುಕ್ತನಾಗಿ ಭಾರತಕ್ಕೆ ಕಾಲಿಟ್ಟ ಕ್ಷಣ, ಜನರು ಹುಡುಕಿದ್ದು ಮಾತ್ರ ಆತನ ಜಾತಿಯನ್ನು.
SCROLL FOR NEXT