ದೇಶ

ಅಭಿನಂದನ್ ವರ್ಧಮಾನ್ ಹೆಸರಿನಲ್ಲಿ ಹರಿದಾಡುತ್ತಿದೆ ನಕಲಿ ಟ್ವಿಟರ್ ಖಾತೆ!

Nagaraja AB

ನವದೆಹಲಿ: ಸುಮಾರು 60 ಗಂಟೆಗಳ ಕಾಲ ಪಾಕಿಸ್ತಾನ ಸೈನಿಕರ ವಶದಲ್ಲಿದ್ದು,ನಂತರ ಭಾರತಕ್ಕೆ ವಾಪಾಸ್ ಆಗಿ ವಾಯುಪಡೆ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೆಸರಿನಲ್ಲಿ ಟ್ವೀಟರ್ ನಲ್ಲಿ ನಕಲಿ ಖಾತೆಯೊಂದು ಹರಿದಾಡುತ್ತಿದೆ ಎಂಬುದು ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.

@Abhinandan_wc  ಹೆಸರಿನಲ್ಲಿ  ಕಳೆದ ತಿಂಗಳು ಈ ಟ್ವಿಟರ್ ಖಾತೆ ತೆರೆಯಲ್ಪಟ್ಟಿದ್ದು,  2000 ಪಾಲೋವರ್ಸ್ ಹೊಂದಿದ್ದೆ. ತಮಿಳು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಅನೇಕ  ಪೋಸ್ಟ್ ಗಳನ್ನು ಇದರಿಂದಲೇ ಮಾಡಲಾಗಿದೆ.

ಆದಾಗ್ಯೂ, ಇದು ವರ್ಧಮಾನ್ ಅವರಿಗೆ ಸಂಬಂಧಿಸಿದ ಟ್ವೀಟರ್ ಖಾತೆ ಅಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಪಪಡಿಸಿವೆ.

ಶನಿವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ,  ಅಭಿನಂದನ್ ಅವರನ್ನು  ಭೇಟಿಯಾಗಿರುವುದು ಹಾಗೂ ಅಭಿನಂದನ್  ತಮ್ಮ ಕುಟುಂಬದ ಜೊತೆಗಿರುವ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ.
SCROLL FOR NEXT