BJP MP Savitribai Phule joins Congress
ನವದೆಹಲಿ: ಲೋಕಸಭೆ ಚುನಾವಣೆ ಇನ್ನೂ ಕೆಲವೇ ತಿಂಗಳು ಬಾಕಿ ಉಳಿದಿರುವಾಗ ಬಿಜೆಪಿ ಹಾಲಿ ಸಂಸದೆ ಸಾವಿತ್ರಿ ಬಾಯಿ ಪುಲೆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಕಾಂಗ್ರೆಸ್ ಸೇರಿದ ಸಾವಿತ್ರಿ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾರ್ಯದರ್ಶಿ, ಪ್ರಿಯಾಂಕಾ ಗಾಂಧಿ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ಆಹ್ವಾನಿಸಿದರು.
ಉತ್ತರ ಪ್ರದೇಶದ ಬಾಹಾರಿಚ್ ಕ್ಷೇತ್ರದಿಂದ ಬಿಜೆಪಿ ಸಂಸದೆಯಾಗಿ ಸಾವಿತ್ರಿ ಬಾಯಿ ಪುಲೆ 2014 ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು,
ದೇಶದ ಸಂವಿಧಾನ ರಕ್ಷಿಸಲು ಕಾಂಗ್ರೆಸ್ ಸೇರಿದ್ದಗಿ ಸಾವಿತ್ರಿ ಬಾಯಿ ಪುಲೆ ಹೇಳಿದ್ದಾರೆ, ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ಗ ಸಾವಿತ್ರಿ ಬಾಯಿ ಪುಲೆ ಮೀಸಲಾತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos