ದೇಶ

ಪರಿಕ್ಕರ್ ತೀವ್ರ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ: ಗೋವಾ ಸಚಿವ

Lingaraj Badiger
ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಅಡ್ವಾನ್ಸಡ್-ಸ್ಟೇಜ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಆದರೂ ಅವರು ರಾಜ್ಯದ ಜನತೆಗಾಗಿ ಈಗಲೂ ಕೆಲಸ ಮಾಡುತ್ತಿದ್ದಾರೆ ಎಂದು ಗೋವಾ ಸಚಿವ ವಿಜಯ್ ಸರ್ದೇಸಾಯಿ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸರ್ದೇಸಾಯಿ, ಸ್ಮಶಾನಕ್ಕೆ ಹಣ ಬಿಡುಗಡೆ ಮಾಡಿದ ಹಾಗೂ ಮತ್ತೊಂದು ಯೋಜನೆಗೆ ಅನುಮೋದನೆ ನೀಡಿದ ಸಿಎಂ ಪರಿಕ್ಕರ್ ಅವರನ್ನು ಭೇಟಿ ಮಾಡಿ, ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದೇನೆ. ಅವರು ಕ್ಯಾನ್ಸರ್ ನಿಂದ ಅದರಲ್ಲೂ ಅಡ್ವಾನ್ಸಡ್ ಸ್ಟೇಜ್ ನಲ್ಲಿದ್ದರು ಅವರು ರಾಜ್ಯದ ಜನತೆಗಾಗಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ರಾಜ್ಯದ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸುತ್ತಿದ್ದೇವೆ ಎಂದರು.
ಇದೇ ವೇಳೆ ಈ ಹಿಂದೆ ತಾವು ಕ್ಯಾನ್ಸರ್ ಕುರಿತು ಕಾರ್ಯಕ್ರಮವೊಂದರಲ್ಲಿ ಪರಿಕ್ಕರ್ ಅವರನ್ನು ಉದಾಹರಣೆಯಾಗಿ ನೀಡಿದ್ದನ್ನು ನೆನಪಿಸಿಕೊಂಡ ಸಚಿವರು, ನಾವು ಯಾವುದೇ ರಾಜಕೀಯ ಲೆಕ್ಕಾಚಾರದಿಂದ ಅವರೊಂದಿಗೆ ಕೈಜೋಡಿಸಿಲ್ಲ. ಅವರಿಗೆ ಕ್ಯಾನ್ಸರ್ ಬರುತ್ತೆ ಅಂತ ಊಹಿಸಿರಲಿಲ್ಲ. ಅದು ನಮ್ಮ ಕನಸಗುಳನ್ನು ಸಾಯುಸುತ್ತಿದೆ. ಆದರೂ ದೆವರು ದೊಡ್ಡವನು. ಅವರಿಗೆ ಉತ್ತಮ ಕೆಲಸ ಮಾಡುವ ಶಕ್ತಿ ನೀಡಿದ್ದಾನೆ ಎಂದರು.
SCROLL FOR NEXT