ಭಾರತೀಯ ನೌಕಾದಳದ ಮುಖ್ಯಸ್ಖ ಸುನಿಲ್ ಲಾಂಬಾ 
ದೇಶ

ದೇಶವನ್ನು ಅಸ್ಥಿರಗೊಳಿಸಲು ಪಾಕಿಸ್ತಾನ ಪ್ರಯತ್ನ, ನಾವು ಎಲ್ಲಾ ರೀತಿಯಲ್ಲೂ ಸಜ್ಜು: ನೌಕಾ ಪಡೆ ಮುಖ್ಯಸ್ಥ ಸುನೀಲ್‌ ಲಾಂಬಾ

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಸಮುದ್ರ ಭಯೋತ್ಪಾದನೆ ಕುರಿತು ಉಗ್ರರಿಗೆ ತರಬೇತಿ ನೀಡಲಾರಂಭಿಸಿದ್ದು,...

ನವದೆಹಲಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಸಮುದ್ರ ಭಯೋತ್ಪಾದನೆ ಕುರಿತು ಉಗ್ರರಿಗೆ ತರಬೇತಿ ನೀಡಲಾರಂಭಿಸಿದ್ದು, ನಾವೂ ಕೂಡ ಎಲ್ಲ ರೀತಿಯ ಪರಿಸ್ಥಿತಿಗೆ ಸಜ್ಜಾಗಿದ್ದೇವೆ ಎಂದು ಭಾರತೀಯ ನೌಕಾದಳದ ಮುಖ್ಯಸ್ಖ ಸುನಿಲ್ ಲಾಂಬಾ ಹೇಳಿದ್ದಾರೆ.
ದೆಹಲಿಯಲ್ಲಿ ಇಂದು ಏರ್ಪಡಿಸಲಾಗಿರುವ ಇಂಡೋ ಪೆಸಿಫಿಕ್‌ ರೀಜಿನಲ್‌ ಡಯಾಲೋಗ್‌ ಸಮಾವೇಶದಲ್ಲಿ ಮಾತನಾಡಿದ ಅವರು, 'ಭಾರತದ ವಿರುದ್ಧ ಸಮುದ್ರ ಮೂಲಕ ಭಯೋತ್ಪಾದಕ ದಾಳಿ ನಡೆಸಲು ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ. ಪಾಕ್‌ ಮೂಲದ ಉಗ್ರರು ಹಿಂದೆ 2008ರಲ್ಲಿ ಮುಂಬಯಿ ಮೇಲೆ ನಡೆಸಿದ್ದ 26/11ರ ಉಗ್ರ ದಾಳಿಯ ರೀತಿ ಸಮುದ್ರ ಮೂಲಕ 'ಸಮುಂದರೀ ಜಿಹಾದ್‌' ರೂಪದಲ್ಲಿ ಉಗ್ರ ದಾಳಿ ನಡೆಸುವುದಕ್ಕೆ ಭಯೋತ್ಪಾದಕರಿಗೆ ತರಬೇತಿ ನೀಡಲಾಗುತ್ತಿದೆ ಮತ್ತು ಇದು ಅತ್ಯಂತ ಅಪಾಯಕಾರಿಯೂ ಸವಾಲಿನದ್ದೂ ಆಗಿದೆ ಎಂದು ಹೇಳಿದರು. 
'ಭಯೋತ್ಪಾದನೆ ಎನ್ನುವುದು ಇಂದು ವಿಶ್ವಾದ್ಯಂತ ಶಾಂತಿ ಮತ್ತು ಸ್ಥಿರತೆಗೆ ಒದಗಿರುವ ಅತೀ ದೊಡ್ಡ ಸವಾಲು ಮತ್ತು ಬೆದರಿಕೆಯಾಗಿದೆ. ಆದ್ದರಿಂದ ಅಂತಾರಾಷ್ಟ್ರೀಯ ಸಮುದಾಯ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಒಟ್ಟಾಗಬೇಕಾದ ಅಗತ್ಯವಿದೆ. ಭಾರತ ಸಹಿತ ವಿಶ್ವದ ಅನೇಕ ದೇಶಗಳಲ್ಲಿ, ವಿಶೇಷವಾಗಿ ಇಂಡೋ-ಫೆಸಿಫಿಕ್‌ ಪ್ರಾಂತ್ಯದಲ್ಲಿ ಭಯೋತ್ಪಾದನೆಯು ಈಚಿನ ವರ್ಷಗಳಲ್ಲಿ ಬಹುರೂಪಗಳನ್ನು ಪಡೆದಿದೆ; ವಿಶ್ವದ ಕೆಲವೇ ದೇಶಗಳು ಮಾತ್ರವೇ ಇಂದು ಭಯೋತ್ಪಾದನೆಯಿಂದ ಮುಕ್ತವಾಗಿವೆ ಎಂದು ಸುನಿಲ್‌ ಲಾಂಬಾ ಹೇಳಿದರು.
'ಕೇವಲ ಮೂರು ವಾರಗಳ ಅವಧಿಯಲ್ಲಿ ಕಣಿವೆ ರಾಜ್ಯದಲ್ಲಾದ ಉಗ್ರ ದಾಳಿಗಳ ಕುರಿತು ಮಾಹಿತಿ ಇದೆ. ಈ ಹೊತ್ತಿನಲ್ಲಿ ಸಮುದ್ರ ಮಾರ್ಗದಲ್ಲಿ ಉಗ್ರ ದಾಳಿ ನಡೆಸುವ ಕುರಿತು ಮಾಹಿತಿಗಳು ಲಭ್ಯವಾಗಿದೆ. ನೌಕಾದಳ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಉಗ್ರ ಎಲ್ಲ ಪ್ರಯತ್ನ ಸಂಪೂರ್ಣ ವಿಫಲಗೊಳಿಸಲು ಮತ್ತು ಅವರಿಗೆ ತಿರುಗೇಟು ನೀಡಲು ಸೇನೆ ಸರ್ವಸನ್ನದ್ಧವಾಗಿದೆ ಎಂದೂ ಲಾಂಬಾ ಹೇಳಿದರು.
'ಗಡಿ ರಾಜ್ಯಗಳಲ್ಲಿ ಹಿಂಸಾಚಾರ ನಡೆಸುವ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಇಂಡೋ-ಫೆಸಿಪಿಕ್‌ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಭಯೋತ್ಪಾದನಾ ದಾಳಿಗಳು ನಡೆದಿವೆ. ಇದರಿಂದ ವಿಶ್ವದ ಕೆಲವು ದೇಶಗಳು ನಷ್ಟ ಅನುಭವಿಸುತ್ತಿವೆ.  ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಭಯೋತ್ಪಾದನೆ ಬೆದರಿಕೆಗಳ ವ್ಯಾಪ್ತಿ ವಿಸ್ತಾರಗೊಂಡಿದೆ. ದೇಶ-ಪ್ರಾಯೋಜಿತ ಭಯೋತ್ಪಾದನೆಯ ಗಂಭೀರ ಪರಿಣಾಮಗಳನ್ನು ಭಾರತ ಹೆಚ್ಚಾಗಿ ಎದುರಿಸಿದೆ.  ಕೇವಲ 3 ವಾರಗಳ ಹಿಂದೆ  ಜಮ್ಮು ಮತ್ತು ಕಾಶ್ಮೀರದ ಮೇಲೆ ಭಯೋತ್ಪಾದನೆಯ ಭೀಕರ ದಾಳಿ ನಡೆದಿರುವುದಕ್ಕೆ ನಾವೆಲ್ಲಾ ಸಾಕ್ಷಿಗಳಾಗಿದ್ದೇವೆ. ಸಮುದ್ರದ ಮೂಲಕವೂ ವಿವಿಧ ಕಾರ್ಯಾಚರಣೆಗಳನ್ನು ನಡೆಸಲು ಭಯೋತ್ಪಾದಕರಿಗೆ ತರಬೇತಿ ನೀಡಲಾಗುತ್ತಿದೆ ಎಂಬ ಬಗ್ಗೆ ತಮಗೆ ಮಾಹಿತಿ ಇದೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT